ಸುದ್ದಿ ಕನ್ನಡ ವಾರ್ತೆ

ಕಾರವಾರ:ತಾಲೂಕಿನ ಮಾಜಾಳಿಯ ತನಿಖಾ ಠಾಣೆಯಲ್ಲಿ ಮಾನ್ಯ ಜಂಟಿ ಆಯುಕ್ತರು, (ಜಾರಿ ಮತ್ತು ತನಿಖೆ), ಮಂಗಳೂರು ವಿಭಾಗ, ಮಂಗಳೂರುರವರ ನಿರ್ದೇಶನ ಹಾಗೂ ಮಾನ್ಯ ಅಬಕಾರಿ ಉಪ ಆಯುಕ್ತರು ಉತ್ತರ ಕನ್ನಡ ಜಿಲ್ಲೆ ಕಾರವಾರರವರ ಮಾರ್ಗದರ್ಶನದಲ್ಲಿ ದಿನಾಂಕ : 09.03.2026 ರಂದು ಬೆಳಗ್ಗೆ 11.30ರ ಸಮಯದಲ್ಲಿ ಸಿಬ್ಬಂದಿಗಳೊಂದಿಗೆ, ಕಾರವಾರ ಮಾಜಾಳಿ ತನಿಖಾ ಠಾಣೆಯಲ್ಲಿ ಅಬಕಾರಿ ಅಕ್ರಮಗಳ ಪತ್ತೆಗಾಗಿ ವಾಹನಗಳ ತಪಾಸಣೆ ನಡೆಸುತ್ತಿರುವಾಗ ಬಂದ ಖಚಿತ ಬಾತ್ಮಿ ಮೇರೆಗೆ ಕಾರವಾರ ವಲಯದ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಕೂಡಿಕೊಂಡು ತಪಾಸಿಸುತ್ತಿರುವಾಗ ಒಬ್ಬ ಮಹಿಳೆಯು ಎರಡು ಚೀಲಗಳನ್ನು ಹೊತ್ತುಕೊಂಡು ಗೋವಾದಿಂದ ಕಾರವಾರದ ಕಡೆಗೆ ಬರುವುದು ಕಂಡುಬಂದಿದ್ದು, ಅವಳನ್ನು ತಡೆದು ತಪಾಸಣೆ ನಡೆಸಿದಾಗ ಎರಡು ಪ್ರತ್ಯೇಕ ಚೀಲಗಳಲ್ಲಿ 750 ಮಿಲಿಯ 37 ಗೋವಾ ರಾಜ್ಯದ ಮದ್ಯದ ಬಾಟಲಿಗಳು (ಒಟ್ಟು: 27.5ಲೀ) ಪತ್ತೆಯಾಗಿರುತ್ತವೆ, ಆರೋಪಿತಳನ್ನು ಮತ್ತು ದೊರೆತ ಮದ್ಯದೊಂದಿಗೆ ಅಬಕಾರಿ ಉಪ ನಿರೀಕ್ಷಕರು, ಕಾರವಾರ ವಲಯರವರಿಗೆ ಮುಂದಿನಕ್ರಮಕ್ಕಾಗಿ ಹಸ್ತಾಂತರಿಸಲಾಯಿತು.