Banner Ad

ಸುದ್ದಿ ಕನ್ನಡ ವಾರ್ತೆ

ಜೊಯಿಡಾ :ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ವಿಸ್ತರಣಾ ಶಾಖೆ ಜೋಯ್ದ ವತಿಯಿಂದ ಗಣೇಶ್ ಗುಡಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮದ ಉದ್ಘಾಟಕ ರಾಗಿ ಶ್ರೀಮತಿ ಮಂಜುಳಾ ರಾಜಶೇಖರ್ ಅಧ್ಯಕ್ಷರು ವನಸುಮ ಮಹಿಳಾ ಮಂಡಳ ಗಣೇಶ್ ಗುಡಿ ಇವರು ದೀಪವನ್ನು ಬೆಳಗುಸುವುದರ ಜೊತೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಸ್ತವಿಕವಾಗಿ ಅಶೋಕ್ ಸೂರ್ಯವಂಶಿ ಯೋಜನಾಧಿಕಾರಿಗಳು ಸಿಬಿಡಿ ಆರ್ ಸೆಟ್ ಜೋಯ್ದ ಇವರು 1908 ರಲ್ಲಿ ಅಮೆರಿಕಾದ ನ್ಯೂಯಾರ್ಕಿನಲ್ಲಿ ನಡೆದ ಚಳುವಳಿ ದಿನವಾಗಿದೆ ಸುಮಾರು 15 ಸಾವಿರ ಮಹಿಳೆಯರು ತಮ್ಮ ಮತದಾನದ , ಸಮಾನತೆ ಹಕ್ಕು ಗಳಿಗಾಗಿ ಮೆರವಣಿಗೆ ನಡೆಸಿದ ದಿನ ಅಲ್ಲದೆ 1917 ರಲ್ಲಿ ರಷ್ಯಾದ ಮಹಿಳೆಯರು ಆಹಾರ ಮತ್ತು ಯುದ್ಧ ವಿರೋಧಿಸಿ ಮಾರ್ಚ್ 8ರಂದು ಅಲ್ಲಿಯ ಮಹಿಳೆಯರು ಮುಷ್ಕರ ನಡೆಸಿರುವ ದಿನವಾಗಿದೆ ಇದರ ಉದ್ದೇಶ ಮಹಿಳೆಯರು ಸಾಮಾಜಿಕ, ಸಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಸಾಧನೆಗಳನ್ನು ಗೌರವಿಸುವುದು ಮತ್ತು ಲಿಂಗ ಸಮಾನತೆಗಾಗಿ ಜಾಗೃತೆ ಮೂಡಿಸುವುದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಯಾಗಿದೆ ಎಂದು ಹೇಳಿದರು. ಡಾಕ್ಟರ್ ಪ್ರಿಯಾಂಕ ಕೆಪಿಸಿ ಆಸ್ಪತ್ರೆ ಗಣೇಶ್ ಗುಡಿ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಹಿಳೆ ಅಬಲೆಯಲ್ಲ , ಅವಳು ಸಬಲೆ ಮತ್ತು ಹೆಣ್ಣು ಸಮಾಜದಲ್ಲಿ ಮಗಳಾಗಿ, ಸಹೋದರಿಯಾಗಿ, ಅಕ್ಕನಾಗಿ, ತಂಗಿಯಾಗಿ ತಾಯಿಯಾಗಿ ಮಗುವಿಗೆ ಜನ್ಮ ನೀಡುತ್ತಾಳೆ ಹಾಗೆ ಅವರ ಸಾಧನೆಗಳ ಗೌರವಿಸುವ ದಿನವಾಗಿದೆ ಎಂದು ಹೇಳಿದರು ಲೀಲಾ ನಾಯಕ್ ಪಿಡಿಒ ಗ್ರಾಮ ಪಂಚಾಯತ್ ಅವೇಡ ಇವರು ಕಾರ್ಯಕ್ರಮ ಉದ್ದೇಶಿಸಿ ವಿಶ್ವ ಮಹಿಳಾ ದಿನಾಚರಣೆ ಮಹಿಳೆಯರ ಹಕ್ಕುಗಳ ಅರಿವು ಮೂಡಿಸುವುದು ಮತ್ತು ಸಮಾನ ಹಕ್ಕನ್ನು ನೀಡುವ ದಿನವನ್ನು ಮಹಿಳಾ ದಿನಾಚರಣೆವಾಗಿದೆ ಎಂದು ಹೇಳಿದರು ಅರುಣ್ ಭಾಗ್ವತಿರಾಜ್ ನಿಕಟಪೂರ್ವ ಅಧ್ಯಕ್ಷರು ಮಹಿಳೆಯರ ಸಾಧನೆ ಮಾಡಿರುವ ಮಹಿಳೆಯರ ಗೌರವಿಸುವ ದಿನವಾಗಿದೆ ಹಾಗೂ 1975 ರಲ್ಲಿ ವಿಶ್ವಸಂಸ್ಥೆ ಈ ದಿನವನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿ ಅಧಿಕೃತವಾಗಿ ಘೋಷಣೆ ಆಗಿದೆ ಎಂದು ಮಾತನಾಡಿದರು ವೇದಿಕೆ ಮೇಲೆ ಶ್ರೀಮತಿ ಶಿಲ್ಪ ಬಿ. ವ್ಯವಸ್ಥಾಪಕರು ಕೆನರಾ ಬ್ಯಾಂಕ್ ಗಣೇಶ್ ಗುಡಿ, ಶ್ರೀಮತಿ ರೇಣುಕಾ ಶರಣಪ್ಪ ಗದ್ದಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಅವೇಡ, ಗೌಸ್ ಅಮೀನ್ ಬಾವಿ ನಿಕಟಪೂರ್ವ ಸದಸ್ಯರು ಗ್ರಾಮ ಪಂಚಾಯತ್ ಅವೇಡ, ಶ್ರೀಮತಿ ಸುಮಿತ್ರ ಬಸವನಗೌಡ ಮೇಡಂ ಸ್ಥಳೀಯರು ಗಣೇಶ್ ಗುಡಿ, ಜಯಮ್ಮ ಡಿ ಅಶೋಕ್ ಕುಮಾರ್ ಮೇಡಂ ಕೆಪಿಸಿ ಗಣೇಶ್ ಗುಡಿ ಶ್ರೀಯುತ ಶರಣಪ್ಪ ಗದ್ದಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಅವೇಡ ಶ್ರೀಮತಿ ಶ್ರೀಜಾ ಉನ್ನಿಕೃಷ್ಣ ಕಾರ್ಯದರ್ಶಿ ವನಸುಮ ಮಹಿಳಾಮಂಡಲ ಗಣೇಶ್ ಗುಡಿ, ಶ್ರೀಮತಿ ಭಾರತಿ ನಾಯಕ್ ಅಧ್ಯಕ್ಷರು ಒಕ್ಕೂಟ ಅವೇಡ ಶ್ರೀಮತಿ ಶಿಲ್ಪಾ ಸಂತೋಷ್ ಶೆಟ್ಟಿ ಮೇಡಂ ಕೆಪಿಸಿ ಗಣೇಶ್ ಗುಡಿ ಮುಂತಾದವು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಮೂರು ವಿಭಿನ್ನ ಆಟಗಳ ಮುಖಾಂತರ ವಿಜೇತರಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು .80ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.

Banner Ad
Banner Ad