ಜೋಯಿಡಾ ದಲ್ಲಿ ವ್ಯಾಪಾರಿ ಕೇಂದ್ರ ಉದ್ಘಾಟನಾ ಸಮಾರಂಭ ತಾಲೂಕಾ ಕೇಂದ್ರ ಜೋಯಿಡಾ ದಲ್ಲಿ ಬರುವ ಸೋಮವಾರ ಬೆಳಿಗ್ಗೆ 11 30 ಕ್ಕೆ ಯಲ್ಲಾಪುರ ತಾಲೂಕಿನ ಕಳಚೆಯ ಸಹ್ಯಾದ್ರಿ ವಿವಿದೊದ್ದೇಶ ಕೃಷಿ ಸಹಕಾರಿ ಸಂಘದ ಶಾಖೆ ಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮ ವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟನೆ ಮಾಡಲಿದ್ದಾರೆ ಎಂದು ಅಧ್ಯಕ್ಷ ಉಮಾಮಹೇಶ್ವರ ಭಾಗ್ವತ ಹೇಳಿದರು , ಅವರು ಜೋಯಿಡಾ ದಲ್ಲಿ ತಮ್ಮ ಸಂಘದ ಆಡಳಿತ ಮಂಡಳಿಯ ಸದಸ್ಯ ರೊಂದಿಗೆ ಪತ್ರಿಕಾ ಗೋಷ್ಠಿ ನಡೆಸಿ ಮಾಹಿತಿ ನೀಡಿದರು, ಈ ಸಂದರ್ಭದಲ್ಲಿ ಶಾಸಕರಾದ ಆರ್ ವಿ ದೇಶಪಾಂಡೆ,, ಶಿವರಾಮ ಹೆಬ್ಬಾರ, ಮಾಜಿ, ಶಾಸಕ ಸುನೀಲ ಹೆಗಡೆ, ಮಾಜಿ ಎಂ ಎಲ್ ಸಿ, ಶ್ರೀಕಾಂತ್ ಘೋಟ್ನೆಕರ್ ಸೇರಿದಂತೆ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು, ಗಣ್ಯರು ಉಪಸ್ಥಿತರಿರುವರು ಎಂದು ತಿಳಿಸುತ್ತಾ ಕಳಚೆ ಯ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ವು ಕಾಳಿ ನದಿಗೆ ಕೊಡಸಳ್ಳಿ ಆಣೆಕಟ್ಟು ಕಟ್ಟಿದ ಮೇಲೆ ಕ್ಷೆತ್ರ ಸೀಮಿತ ವಾಗಿ ವ್ಯವಹಾರ ಬೆಳೆಸುವ ಉದ್ದೇಶ ದಿಂದ ನಾಲ್ಕು ಶಾಖೆ ಗಳ ಮೂಲಕ ವ್ಯವಹಾರ ನಡೆಸುತ್ತಿದೆ, ಉತ್ತಮ ಸಾಧನೆ ಆಗಿದೆ ಜೋಯಿಡಾ ದಲ್ಲಿ ಕೂಡ ಸಾಕಷ್ಟು ಅಡಿಕೆ ಬೆಳೆ ಗಾರರು ಇದ್ದಾರೆ, ಅವರಿಗೆ ಅನುಕೂಲ ವಾಗಲಿ ಎಂದು ಅಡಿಕೆ ಕಾಳು ಮೆಣಸು ಖರೀದಿ ಕೇಂದ್ರ ವನ್ನು ಆರಂಭಿಸುತ್ತಿದ್ದೇವೆ, ಜೊತೆಗೆ ಕೃಷಿ ಉಪಕರಣ, ನೀರಾವರಿ ಸಲಕರಣೆ ಗಳು, ತುತ್ತ ಸುಣ್ಣ, ಗಳನ್ನು ರೈತರಿಗಾಗಿ ಬೇಡಿಕೆಯಂತೆ ನ್ಯಾಯವಾದ ಬೆಲೆಯಲ್ಲಿ ಪೂರೈಕೆ ಮಾಡುತ್ತೇವೆ ಎನ್ನುತ್ತಾ ನಮ್ಮ ಸಂಘ 70 ಕೋಟಿಗೂ ಹೆಚ್ಚು ಠೇವಣಿ ಹೊಂದಿದ್ದು, ಸ್ವಂತ ನಿವೇಶನ ಹೊಂದಿದೆ, 4216ಸದಸ್ಯರು ಉತ್ತಮ ವ್ಯವಹಾರ ಮಾಡುವ ಮೂಲಕ ಯಲ್ಲಾಪುರ ದಂತ ಪ್ರದೇಶ ದಲ್ಲೂ ನಾವು ವ್ಯವಹಾರ ದಲ್ಲಿ ಗುರುತಿಸಿಕೊಂಡಿದ್ದೇವೆ ಜೋಯಿಡಾ ದಲ್ಲೂ ಕೂಡ ಉತ್ತಮ ವ್ಯವಹಾರ ಮಾಡುವ ಮೂಲಕ ಇಲ್ಲಿನ ರೈತರಿಗೆ ಅನುಕೂಲ ಮಾಡಿ ಕೊಡುತ್ತೇವೆ ಈ ಬಗ್ಗೆ ಸಹಕಾರಿ ಇಲಾಖೆ ಮತ್ತು ಹಳಿಯಾಳ ಎಪಿಎಂಸಿ ಜೊತೆ ಮಾತನಾಡಿದ್ದೇವೆ ಎಂದು ಸಂಘದ ಅಧ್ಯಕ್ಷ ಉಮಾಮಹೇಶ್ವರ ಬಾಗ್ವತ ಹೇಳಿದರು, ಈ ಸಂದರ್ಭದಲ್ಲಿ ಸದಸ್ಯ ರಾದ ಶ್ರೀಕಾಂತ್ ಹೆಬ್ಬಾರ್,ರಾಘವೇಂದ್ರ ಭಟ್, ಕಾರ್ಯ ನಿರ್ವಾಹಕ ದತ್ತಾತ್ರಯ ಭಟ್, ಸ್ಥಳೀಯ ರಾದ ಸುಬ್ರಾಯ ಹೆಗಡೆ, ಶಿವಾನಂದ ಪಾಟೀಲ್, ಜೋಯಿಡಾ ಶಾಖೆಯ ಉದಯ ಬಾಗ್ವತ ಇತರರು ಉಪಸ್ಥಿತರಿದ್ದರು
