ಸುದ್ದಿ ಕನ್ನಡ ವಾರ್ತೆ

ಶಿರಸಿ: ನಾಡಿನ ಹಬ್ಬದ ಮಾದರಿಯಲ್ಲಿ ಡಿಸೆಂಬರ್ ೨೭,೨೮,೨೯ ರಂದು ಬೆಂಗಳೂರಿನ ಅರಮನೆ‌ ಮೈದಾನದಲ್ಲಿ ತೃತೀಯ ಹವ್ಯಕ ಸಮ್ಮೇಳನವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ‌ ಎಂದು ಹವ್ಯಕ ಮಹಾ ಸಭೆಯ ಅಧ್ಯಕ್ಷ ಗಿರಿಧರ ಕಜೆ ಹೇಳಿದರು.


ಅವರು ಸೋಮವಾರ ನಗರದ ಯೋಗ ಮಂದಿರದಲ್ಲಿ ನಡೆಸಿದ ಸುದ್ದಿಗೋಷ್ಠಿ ನಡೆಸಿ, ಇದು ತೃತೀಯ ವಿಶ್ವ ಹವ್ಯಕ ಸಮೇಳನ ನಡೆಯಲಿದೆ. ಐತಿಹಾಸಿಕ ದಾಖಲೆಯ ಸ್ಮರಣೀಯ ಮೂರು ದಿನಗಳ ಕಾಲ ನಡೆಯಲಿದೆ. ವಿವಿಧ ಅನಾವರಣಗಳ ಜೊತೆಗೆ ಎಂಟು ಪ್ರಮುಖ, ಚಿಂತನೀಯ ಗೋಷ್ಟಿಗಳೂ ನಡೆಯಲಿದೆ ಎಂದರು.


ಸಮ್ಮೇಳ‌ನದಲ್ಲಿ ಕೃಷಿ, ವಿದ್ವಾಂಸರು, ಯೋಧರು, ಶಿಕ್ಷಕರು, ಸಾಧಕ ವಿದ್ಯಾರ್ಥಿಗಳಿಗೆ, ಸಾಧಕರಿಗೆ, ಹವ್ಯಕ ಸ್ಪೂರ್ತಿ ರತ್ನ ವಿಭಾಗದಲ್ಲಿ ೫೫೭ ಸಾಧಕರಿಗೆ ಪ್ರಶಸ್ತಿ‌ ಪ್ರದಾನ ಆಗಲಿದೆ. ದಿಕ್ಸೂಚಿ ಮಾತು, ಸನ್ಮಾನ, ಸಭಾ‌ ಕಾರ್ಯಕ್ರಮದಲ್ಲಿ ಸಮಾಜದ ಸಮಸ್ತರೂ ಇರಲಿದ್ದಾರೆ.


ನಾಡಿನ ಬೇರೆ ಬೇರೆ ಸಮುದಾಯಗಳ ಅಧ್ಯಕ್ಷರಿಗೆ ಸೌಹಾರ್ದ ಗೌರವ ಸಮರ್ಪಿಸಬೇಕು.‌ ಎಲ್ಲರೂ ಒಂದಾಗಿರಬೇಕು‌ ಎಂಬುದು ನಮ್ಮ ಆಶಯವಾಗಿದೆ ಎಂದರು‌.
ಯಕ್ಷಗಾನದಲ್ಲಿ ಎಲ್ಲ ಮೇಳದ ಪ್ರಮುಖ ಹವ್ಯಕ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಿದ್ದಾರೆ. ಜೊತೆಗೆ ಭರತನಾಟ್ಯ, ಸಂಗೀತ ಕಲಾವಿದರು ಪ್ರಸ್ತುತಿ ಮಾಡಲಿದ್ದಾರೆ. ಕನ್ನಡ ಭಾಷೆಯ ಪ್ರಥಮ ನಾಟಕ ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ ನಾಟಕ ವಿವಿಧ ಹಿರಿತೆರೆ, ಕಿರುತೆರೆ ಕಲಾವಿದರು ಪ್ರಸ್ತುತಗೊಳಿಸಲಿದ್ದಾರೆ ಎಂದ‌ ಖಜೆ, ಹವ್ಯಕ ಆಹಾರ ಪ್ರದರ್ಶಿನಿ ಇಡಲಿದ್ದೇವೆ. ಹವ್ಯಕ ಪಾಕೋತ್ಸವ, ೮೧ ಕರಕುಶಲ ಮಳಿಗೆಗಳು, ಅಡಿಕೆ‌ ಕೃಷಿ ಪ್ರದರ್ಶನ, ಗಾಯತ್ರೀ ಥೀಂ ಪಾರ್ಕ, ಏಳು ಋಷಿಗಳ ಗೋತ್ರ ಪ್ರವರ, ಹವ್ಯಕರ ಪಾರಂಪರಿಕ ವಸ್ತುಗಳ ಪ್ರದರ್ಶನ, ಯಜ್ಞ ವಿವರಗಳ ಅನಾವರಣ ಆಗಲಿದೆ ಎಂದರು.


ಎಲ್ಲರೂ ಬರಬೇಕು, ವಸತಿ, ಊಟೋಪಚಾರ ಎಲ್ಲವೂ ಉಚಿತವಾಗಿದೆ. ಹವ್ಯಕರ ಮೂರೂ ಮಠಗಳ ಯತಿವರೇಣ್ಯರು, ತ್ರಿಮತಸ್ಥ ಬ್ರಾಹ್ಮಣ ಮಠದವರೂ, ಪೇಜಾವರ, ಮಂತ್ರಾಲಯ, ಕಾಂಚಿ ಗುರುಗಳು,ಕೇಂದ್ರ, ರಾಜ್ಯ ಸಚಿವರು, ಸಿಎಂ‌ ಕೂಡ ಬರಲಿದ್ದಾರೆ. ಮೂರು ದಿನ ಹಬ್ಬವಾಗಿ ಇದು ನಡೆಯಲಿದೆ ಎಂದರು.


ಕಳೆದ ಹವ್ಯಕ ಸಮ್ಮೇಳನ ೭೫ ಸಾವಿರ ಇದೆ. ಈ ಬಾರಿ ಒಂದುವರೆ ಲಕ್ಷ ಜನ ಬರುವ ನಿರೀಕ್ಷೆ ಇದೆ. ಮೂರು ದಿನಕ್ಕೆ ನಾಲ್ಕು ಕೋಟಿ ರೂ.ಗಿಂತ ಅಧಿಕ ಖರ್ಚು ಬರಲಿದೆ. ಇದಕ್ಕೆ ದಾನಿಗಳು ನೆರವಾಗುತ್ತಿದ್ದಾರೆ. ಸಮ್ಮೇಳನದ ಬಳಿಕ ಉಳಿದ ಹಣದಲ್ಲಿ‌ ಇಂಜನೀಯರಿಂಗ್, ಮೆಡಿಕಲ್ ಕಾಲೇಜು ಮಾಡುವ ಚಿಂತನೆ ಇದೆ. ಹಣ ಉಳಿದರೆ ಕೆಲಸ ಮಾಡಲಾಗುತ್ತದೆ‌ ಎಂದರು.
ಈ ವೇಳೆ
ಉಪಾಧ್ಯಕ್ಷರಾದ ಶ್ರೀಧರ ಭಟ್ಟ, ಆರ್.ಎಂ.ಹೆಗಡೆ ಬಾಳೆಸರ, ಪ್ರಧಾನ ಕಾರ್ಯದರ್ಶಿ ವೇಣು ವಿಘ್ನೇಶ ಸಂಪ, ಕಾರ್ಯದರ್ಶಿ
ಪ್ರಶಾಂತ ಭಟ್ಟ ಮಲವಳ್ಳಿ, ನಿರ್ದೇಶಕ ಶಶಾಂಕ ಶಿಗೇಹಳ್ಳಿ, ಇದ್ದರು.