Banner Ad

ಸುದ್ದಿ ಕನ್ನಡ ವಾರ್ತೆ

ಇಲ್ಲಿನ ಸಪ್ತಸ್ವರ ಸೇವಾ ಸಂಸ್ಥೆ (ರಿ), ಆಲೆಮನೆ ಉತ್ಸವ ಸಮಿತಿ ಹಾಗೂ ಊರಿನ ನಾಗರಿಕರ ಸಹಯೋಗದಲ್ಲಿ ನಾಲ್ಕನೇ ವರ್ಷದ “ಆಲೆಮನೆ ಉತ್ಸವ 2026” ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಫೆಬ್ರವರಿ 14 ರಂದು ಯರಮುಖದ ಜನತಾ ಬಯಲಿನಲ್ಲಿ ವಿಜೃಂಭಣೆಯಿಂದ ಜರುಗಲಿದೆ.

Banner Ad

​ಕಾರ್ಯಕ್ರಮದ ವಿವರ:
​ದಿನಾಂಕ 14-02-2026, ಶನಿವಾರ,
​ಸಮಯ ಸಂಜೆ 6:30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ರಾತ್ರಿ 7:30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ.
​ಸ್ಥಳ: ಯರಮುಖ ಜನತಾ ಬಯಲು.
​
​ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಸಮಾಜ ಸೇವಕರಾದ ಶ್ರೀ ಸುಬ್ರಾಯ ವಾಳ್ಕೆ ಅವರು ಉದ್ಘಾಟಿಸಲಿದ್ದಾರೆ. ಗುಂದದ ವೈದಿಕರಾದ ಶ್ರೀ ವೇ|| ಮೂ|| ಪ್ರಸನ್ನ ಭಟ್ಟ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ನಂದಿಗದ್ದೆಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀ ಸುದರ್ಶನ ಭಾಗ್ವತ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
​ಆಶಯ ನುಡಿ ಹಾಗೂ ಅತಿಥಿಗಳಾಗಿ ಶ್ರೀಮತಿ ಸುಮಂಗಲಾ ದೇಸಾಯಿ, ಶ್ರೀಮತಿ ಮಂಗಲಾ ಆರ್. ಹೆಗಡೆ, ಶ್ರೀಮತಿ ರಾಧಾ ಡಿ. ಹೆಗಡೆ, ಶ್ರೀ ಸದಾಶಿವ ದೇಸಾಯಿ, ಶ್ರೀ ಅಜಿತ್ ಥೊರವತ್, ಶ್ರೀ ಎಸ್.ಟಿ. ದಾನಗೇರಿ ಹಾಗೂ ಶ್ರೀ ಲಕ್ಷ್ಮಣ್ ಅಪ್ಪು ಸಿದ್ಧಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

​ವಿಶೇಷ ಆಕರ್ಷಣೆ:
3:30 – 5:30 ರ ವರೆಗೆ ಊರಿನ ಎಲ್ಲಾ ಮಹಿಳೆ ಮತ್ತು ಯುವತಿಯರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ,
​ಉದ್ಘಾಟನಾ ಸಮಾರಂಭದ ನಂತರ ರಾತ್ರಿ 8:30 ರಿಂದ ‘ಸಪ್ತಸ್ವರ ಮೆಲೋಡೀಸ್’ ತಂಡದಿಂದ ಮತ್ತು ಸ್ಥಳೀಯ ಕಲಾವಿದರಿಂದ “ಸಂಗೀತ ರಸ ಮಂಜರಿ” ಹಾಗೂ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ಉಚಿತ ಕಬ್ಬಿನ ಹಾಲು ಹಾಗೂ ಮಂಡಕ್ಕಿ ಸವಿಯುವ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Banner Ad