Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಪಿ ಎಂ ಶ್ರೀ ಪ್ರಾಥಮಿಕ ಜೋಯಿಡಾ ಶಾಲೆಯಲ್ಲಿ ಬುಧವಾರ ಗಣಿತ ಮತ್ತು ವಿಜ್ಞಾನ ಪಠ್ಯಕ್ರಮಕ್ಕೆ ಸಂಬಂಧಿಸಿದ ಗಣಿತ ಹಾಗೂ ವಿಜ್ಞಾನ ವಿಷಯದ ಕುರಿತ ವಿವಿಧ ಬಗೆಯ ವಸ್ತುಗಳ ಪ್ರದರ್ಶನ ನಡೆಯಿತು. ಜೋಯಿಡಾ ಉನ್ನತೀಕರಿಸಿದ ಶಾಲೆಯಲ್ಲಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ LKG ಮತ್ತು UKG ವಿಧ್ಯಾರ್ಥಿಗಳು ತುಂಬಾ ಅಚ್ಚುಕಟ್ಟಾಗಿ ಪಠ್ಯಕ್ಕೆ ಸಂಬಂಧಿಸಿದ ಮಾದರಿಗಳನ್ನು ತಾವೇ ತಯಾರಿಸಿ ತಂದು ಪ್ರದರ್ಶನ ಮಾಡಿದ್ದು ಕಾರ್ಯಕ್ರಮಕ್ಕೆ ಬಂದಂತಹ ಗಣ್ಯರು, ಪಾಲಕರು,ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ಸಾಮಾನ್ಯವಾಗಿ ನಾಲ್ಕನೇ ತರಗತಿಯ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಜ್ಞಾನ ಹೊಂದಿರುತ್ತಾರೆ ಆದರೆ LKG, UKG ವಿಧ್ಯಾರ್ಥಿಗಳು ಭಾಗವಹಿಸಿದ್ದು ತುಂಬಾ ವಿಶೇಷವಾಗಿತ್ತು, ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಪ್ರೋತ್ಸಾಹ ನೀಡಿದ LKG,UKG ವಿಭಾಗದ ಶಿಕ್ಷಕಿಯರಾದ ರೋಹಿಣಿ ಮತ್ತು ಸುಮಿದಾ ಅವರ ಕಾರ್ಯಕ್ಕೆ ಗಣ್ಯರು, ಪಾಲಕ, ಪೋಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Banner Ad
Banner Ad