ಸುದ್ದಿ ಕನ್ನಡ ವಾರ್ತೆ
ಶಿರಸಿಯ ಜನಪ್ರಿಯ ಸಮಾಜ ಸೇವಕರು ಹಾಗೂ ನಗರಸಭೆಯ ಮಾಜಿ ಸದಸ್ಯರಾದ ಶ್ರೀ ರಾಜಪ್ಪ ಜೋಗಳೇಕರ್ ಅವರ ನಿಧನಕ್ಕೆ ಸಂತಾಪವನ್ನು ಸೂಚಿಸುತ್ತೇನೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶೋಕ ವ್ಯಕ್ತಪಡಿಸಿದ್ದಾರೆ.
ಶಿರಸಿಯ ಬಾಪೂಜಿನಗರದ ನಿವಾಸಿಯಾಗಿದ್ದ ಶ್ರೀ ರಾಜಪ್ಪ ಜೋಗಳೇಕರ್ ಅವರು ಶಿಸ್ತುಬದ್ಧ ರಾಜಕಾರಣ ಮತ್ತು ನಿಸ್ವಾರ್ಥ ಸಮಾಜ ಸೇವೆಯ ಮೂಲಕ ಮನೆಮಾತಾಗಿದ್ದವರು. ಸದಾ ಸಾರ್ವಜನಿಕರ ಹಿತವನ್ನೇ ಬಯಸುತ್ತಿದ್ದ ಅವರು, ಶಿರಸಿಯ ಸಾಮಾಜಿಕ ಹಾಗೂ ರಾಜಕೀಯ ಏಳಿಗೆಗಾಗಿ ಶ್ರಮಿಸಿದ ಸಜ್ಜನ ವ್ಯಕ್ತಿತ್ವದವರು.
ಅನೇಕ ಸಂಘ-ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದ ಇವರ ಅಗಲಿಕೆಯು ಶಿರಸಿಯ ನಗರದ ಸಾಮಾಜಿಕ ಕ್ಷೇತ್ರಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿದೆ.
ಲೋಕ ಧ್ವನಿ ಪತ್ರಿಕೆಯ ಮುಖ್ಯ ವರದಿಗಾರರು ಹಾಗೂ ‘ರಾಜ್ ಬಿಗ್ ಬ್ರೇಕಿಂಗ್’ ಸಂಪಾದಕರಾದ ಶ್ರೀ ಜೆ.ಆರ್. ಸಂತೋಷ್ ಕುಮಾರ್ ಸೇರಿದಂತೆ ಅವರ ಕುಟುಂಬದವರಿಗೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತನು ನೀಡಲಿ.
ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಪ್ರಾರ್ಥಿಸುತ್ತಾ, ಅವರಿಗೆ ಭಕ್ತಿಪೂರ್ವಕ ಶ್ರದ್ಧಾಂಜಲಿಗಳನ್ನು ಅರ್ಪಿಸುತ್ತೇನೆ ಎಂದು ಸಂಸದ ಕಾಗೇರಿ ನುಡಿದಿದ್ದಾರೆ.
