Banner Ad

ಸುದ್ದಿ ಕನ್ನಡ ವಾರ್ತೆ
ಶಿರಸಿ:ಶ್ರೀ ಮಾರಿಕಾಂಬಾ ದೇವಿಯ ರಥದ ಕಳಶಕ್ಕೆ ಬಾಳೆಹಣ್ಣು ಎಸೆದರೆ ಅಂದುಕೊಂಡ ಕಾರ್ಯ ಸಿದ್ದಿಸುತ್ತದೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ. ಅದರಂತೆ ಭಕ್ತನೊಬ್ಬ, ಬಾಳೆಹಣ್ಣಿನ ಮೇಲೆ “2028ರ ಚುನಾವಣೆಯಲ್ಲಿ ಭೀಮಣ್ಣ ನಾಯ್ಕ ಆರಿಸಿ ಬಂದು ಎಂಎಲ್‌ಎ ಆಗಲಿ” ಎಂದು ಬರೆದು ರಥಕ್ಕೆ ಎಸೆಯುವ ಮೂಲಕ ತನ್ನ ವಿಶೇಷ ಬೇಡಿಕೆಯನ್ನು ದೇವಿಯ ಮುಂದಿಟ್ಟಿದ್ದಾನೆ.

ಸಾಮಾನ್ಯವಾಗಿ ಭಕ್ತರು ರಥಕ್ಕೆ ಬಾಳೆಹಣ್ಣು ಎಸೆಯುವಾಗ ಆರೋಗ್ಯ, ಐಶ್ವರ್ಯ ಅಥವಾ ಕೌಟುಂಬಿಕ ಸುಖಕ್ಕಾಗಿ ಪ್ರಾರ್ಥಿಸುತ್ತಾರೆ. ಆದರೆ, ಈ ಅಭಿಮಾನಿ ಭಕ್ತ ಬಾಳೆಹಣ್ಣಿನ ಸಿಪ್ಪೆಯ ಮೇಲೆ ಶಾಸಕ ಭೀಮಣ್ಣ ನಾಯ್ಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಆರಿಸಿ ಬಂದು ಶಾಸಕರಾಗಲಿ ಎಂದು ಬರೆದಿದ್ದು, ಶಾಸಕರ ಮೇಲಿರುವ ಅಭಿಮಾನಕ್ಕೆ ಸಾಕ್ಷಿಯಾಗಿದೆ.

Banner Ad
Banner Ad