ಸುದ್ದಿ ಕನ್ನಡ ವಾರ್ತೆ
ಕರಾವಳಿ ಉತ್ಸವದ ಮುಕ್ತಾಯ ಸಮಾರಂಭಕ್ಕೆ ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರು ಬರುತ್ತಾರೆ ಎಂದ ತಕ್ಷಣ ಜಿಲ್ಲೆಯ ಬಹಳಷ್ಟು ಜನರಿಗೆ ಒಂದು ಆಶಾ ಭಾವನೆ ಮನದಲ್ಲೇಮೂಡಿತ್ತು. ಆ ಕ್ಶಣಕ್ಕಾಗಿ ಜನ ಕಾಯುತ್ತಿದ್ದರು, ಸಮಾರಂಭ ದಲ್ಲಿ ಮಾತ ನಾಡಿದ ಉಪ ಮುಖ್ಯ ಮಂತ್ರಿಗಳು ಅದನ್ನು ಹುಸಿ ಮಾಡಲಿಲ್ಲ ಅನ್ನುವದು ಜನರಿಗೆ ತುಂಬಾ ಸಂತಸ ತಂದಿದೆ.
ಅದೇನೆಂದರೆ ಜಿಲ್ಲೆಗೆ ಒಂದು ಮಲ್ಟಿ ಸ್ಪೆಷಲಿಟಿ ಆಸ್ಪತ್ರೆ ಯ ಕನಸು ಜನತೆ ಕಂಡಿದ್ದರು ಬಯಶಿದ್ದರು. ಅದರ ಬಗ್ಗೆ ಅರಿತಿದ್ದ ಉಪಮುಖ್ಯಮಂತ್ರಿ ಗಳು ಸಾವಿರಾರು ಜನರ ಮುಂದೆ ವೇದಿಕೆಯಿಂದ ಆಸ್ಪತ್ರೆಯ ವಿಷಯ ಹೇಳಿದಾಗ ಜನರಿಗಾದ ಸಂತೋಷ, ಖುಷಿ, ಅಷ್ಟಿಷ್ಟಲ್ಲ.ಇದನ್ನೇ ಜನ ಕೂಡ ಬಯಸಿದ್ದರು ಮತ್ತು ಇದಕ್ಕಾಗಿ ಕಾಯುತ್ತಿದ್ದರು. ಇದರ ಹಿಂದೆ ಕಾರವಾರ ಶಾಸಕರು ಸತೀಶ ಶೈಲ ಅವರ ಪ್ರಯತ್ನ ಕೂಡಾ ಸಾಕಷ್ಟಿದೆ ಎನ್ನುವದು ಕೂಡ ಮೆಚ್ಚುವಂತಹದು.
ಒಟ್ಟಾರೆ ಜಿಲ್ಲೆಯ ಜನರಿಗೆ ಹೆಚ್ಚಿನ ವೈದ್ಯಕೀಯಕ್ಕೆ ಹೊರಜಿಲ್ಲೆ ಹೊರ ರಾಜ್ಯ ಗಳಿಗೆ ಹೋಗುವ ಶ್ರಮ ತಪ್ಪಿ ಸಮಯಕ್ಕೆ ಸರಿಯಾದ ವೇಳೆಯಲ್ಲಿ ಸುಸಜ್ಜಿತ ಆಸ್ಪತ್ರೆಗೆ ತಲುಪಲು ಅನುಕೂಲ ವಾಗಬೇಕಾಗಿದೆ ಇದನ್ನು ಬಯಸಿದ್ದ ಜನತೆಗೆ ಉಪಮುಖ್ಯಮಂತ್ರಿ ಗಳು ಆಸ್ಪತ್ರೆಯ ಬಗ್ಗೆ ಹೇಳಿದಾಗ ಅವರಿಗಿರುವ ಜಿಲ್ಲೆಯ ಕಾಳಜಿಯನ್ನು ಜನ ಮೆಚ್ಚಿದ್ದಾರೆ. ಮತ್ತು ಜಿಲ್ಲೆಗೆ ಅವರು ಒಂದೇ ವಾರದಲ್ಲಿ ಎರಡು ಸಲ ಬಂದಿದ್ದು ಕೂಡ ಜನ ಮೆಚ್ಚಿ ಅವರ ಕನಸು ಕೂಡ ಬೇಗನೇ ನನಸಾದರೆ ಜಿಲ್ಲೆಗೆ ಇನ್ನೂ ಹೆಚ್ಚಿನ ಕೆಲಸ ಕಾರ್ಯಗಳು ಆಗುವ ಸಾಧ್ಯತೆ ಗಳಿವೆ ಎಂದು ಹೇಳುತ್ತಿದ್ದಾರೆ.
ಕರಾವಳಿ ಉತ್ಸವದ ವೇದಿಕೆಯಲ್ಲಿ ಉತ್ಸಾಹ ದಿಂದಲೇ ಮಾತನಾಡಿದ ಉಪ ಮುಖ್ಯಮಂತ್ರಿ ಗಳು ಸ್ಥಳೀಯ ಶಾಸಕರನ್ನು ಉಸ್ತುವಾರಿ ಸಚಿವ ಮಂಕಾಳು ವೈದ್ಯರ ಕಾರ್ಯ ವೈಖರಿಯನ್ನು ಮೆಚ್ಚಿ ಮಾತನಾಡಿದ್ದಾರೆ .
ಜೊತೆಗೆ ಮುಂದಿನ ದಿನ ಗಳಲ್ಲಿ ಆರು ಶಾಸಕರನ್ನು ನೀಡಿ ಎಂದಿರುವದು ಅವರಿಗೆ ನಮ್ಮ ಜಿಲ್ಲೆಯ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದು ಹೇಳಲಾಗುತ್ತಿದೆ.ಏನೇ ಇದ್ದರೂ ಜಿಲ್ಲೆಗೆ ಬೇಕಾದ ಸುಸಜ್ಜಿತ ಆಸ್ಪತ್ರೆಯ ಕನಸು ನನಸಾಗಲಿ ಎಂದು ಜನತೆ ಬಯಸುತ್ತಿದ್ದಾರೆ.
ರೂಪಾಯಿ 16 ಲಕ್ಷ ದ ಗಂಧದ ವಿಷ್ಣ್ಣು ಮೂರ್ತಿಯನ್ನು ನೀಡಿರುವದು ಶಾಸಕ ಶೈಲ ಅವರ ಮತ್ತು ಉಪ ಮುಖ್ಯ ಮಂತ್ರಿಗಳ ನಡುವಿನ ಸಂಬಂಧ ವನ್ನು ಇನ್ನೂ ಹೆಚ್ಚಿಸಲಿದೆ.
