Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಕಾತೇಲಿ(ಕುಂಬಾರವಾಡಾ)ಗ್ರಾಮ ಪಂಚಾಯತ ವ್ಯಾಪ್ತಿಯ ಯಂಗ್ ಸ್ಟಾರ್ ಬಾಯ್ಸ್ ವತಿಯಿಂದ ತೆಲೋಲಿಯಲ್ಲಿ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಮೃತಪಾಲಿ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರೆ,ಡೇರಿಯೆ ತಂಡವು (ರನ್ನರ್ ಅಪ್) ದ್ವಿತೀಯ ಸ್ಥಾನ ಪಡೆಯಿತು.

Banner Ad

ಮೂರು ದಿನಗಳ ಕಾಲ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಗ್ರಾಮೀಣ ತಂಡಗಳು ಭಾಗವಹಿಸಿದ್ದವು. ಸಂಘಟಕರು ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲರಿಗೂ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಿದ್ದರು.ಅಂತಿಮ ದಿನದ ಪೈನಲ್ ಪಂದ್ಯದಲ್ಲಿ ಅಮೃತಪಾಲಿ ಹಾಗೂ ಡೇರಿಯೆ ತಂಡಗಳ ನಡುವಿನ ಪಂದ್ಯವು ನಿಗದಿತ ಒವರ್ ನಲ್ಲಿ ಟೈ ಆದ ಪರಿಣಾಮ ರೋಚಕ ಸೂಪರ್ ಒವರ್ ನಲ್ಲಿ ಅಮೃತಪಾಲಿ ತಂಡವು ಡೇರಿಯೆ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

ಡೇರಿಯೆ ತಂಡವು ಉತ್ತಮ ಪ್ರದರ್ಶನ ನೀಡುವ ಮೂಲಕ (ರನ್ನರ್ ಅಪ್ )ದ್ವಿತೀಯ ಸ್ಥಾನ ಪಡೆಯಿತು. ಡೇರಿಯೆ ತಂಡದಲ್ಲಿ ತುಷಾರ ಡೇರೆಕರ (ನಾಯಕ),ಅಖಿಲ್ ಡೇರೆಕರ,ನರೇಶ ಡೇರೆಕರ,ರಾಕೇಶ ಡೇರೆಕರ,ಸಂದೇಶ ಡೇರೆಕರ, ದಿವಾಕರ ಡೇರೆಕರ,ರೋಹಿತ ಡೇರೆಕರ,ದೀಲಿಪ ಡೇರೆಕರ,ರಂಜಿತ ಡೇರೆಕರ,ಅಜಯ ಡೇರೆಕರ, ಹೃಷಿಕೇಶ ಡೇರೆಕರ,ನಿವಾಸ ಡೇರೆಕರ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಈ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ (ರನ್ನರ್ ಅಪ್) ದ್ವಿತೀಯ ಸ್ಥಾನ ಪಡೆದ ಡೇರಿಯೆ ತಂಡದವರಿಗೆ ಊರಿನ ಗ್ರಾಮಸ್ಥರು,ಕ್ರೀಡಾಪ್ರೇಮಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Banner Ad