ಸುದ್ದಿ ಕನ್ನಡ ವಾರ್ತೆ
ಶಿರಸಿ: ಕಾದ ಭೂಮಿಯ ತಾಪಮಾನ ತಣಿಸಲೆಂಬಂತೆ ಈ ವರ್ಷದ ಮೊದಲ ಮಳೆ ಮಂಗಳವಾರ ತಾಲೂಕಿನ ಹಲವಡೆ ಗುಡುಗು, ಸಿಡಿಲಿನ ಆರ್ಭಟದ ಜೊತೆಗೆ ಸುರಿಯಿತು.
ಮಧ್ಯಾಹ್ನ ತನಕವೂ ೩೬- ೩೭ ಡಿಗ್ರಿ ಸೆಲ್ಸಿಯಷ್ಟು ತಾಪಪಮಾನ ಇದ್ದು ನಂತರ ನಗರ ಹಾಗೂ ಗ್ರಾಮೀಣ ಸುದ್ದಿ ಕನ್ನಡ ವಾರ್ತೆ ಭಾಗದ ಹಲವಡೆ ಮಳೆ ಸುರಿದು ತಂಪಾಗಿಸಿತು. ಕೆಲವಡೆ ಒಂದೆರಡು ತಾಸುಗಳಿಗೂ ಅಧಿಕ ಕಾಲ ಸುರಿದ ಮಳೆ ನೀರು ಗಟಾರದಲ್ಲಿ ಹರಿಯುವಂತೆ ಮಾಡಿತು.
ಇನ್ನು ಬೈಕ್ ಸವಾರರಿಗೆ ಸಂಚಾರದ ಸಮಸ್ಯೆ ಆದರೆ, ಕೃಷಿ ಕಾರ್ಯಕ್ಕೆ ತೆರಳಿದವರು ಅರ್ಧಕ್ಕೇ ವಾಪಸ್ ಆದರು. ಗ್ರಾಮೀಣ ಭಾಗದಲ್ಲಿ ವಿದ್ಯುತ್, ದೂರವಾಣಿ ಸ್ಥಗಿತಗೊಂಡವು.
ಕಾದ ವಾತಾವರಣದಲ್ಲಿ ಮೊದಲ ಮಳೆ ಬಿದ್ದ ಪರಿಣಾಮ ಬೆಳೆಗಾರರಿಗಡ ಅಡಿಕೆ ಮುಗಡು ಉದರುವ ಆತಂಕ ಕೂಡ ಮನೆ ಮಾಡಿದೆ. ಹಲವರ ಕಾಳುಮೆಣಸು, ಅಡಿಕೆ ಕೂಡ ಅಂಗಳದಲ್ಲಿದ್ದು ಅದೂ ಒದ್ದೆಯಾಯಿತು.
ಕಾದ ವಾತಾವರಣದಲ್ಲಿ ಸಂಜೆ ವೇಳೆಗೆ ಮಳೆ ಬಂದಿದ್ದರೆ ಅಷ್ಟು ತೊಂದರೆ ಬೆಳೆಗಳಿಗೆ, ಹರಿವ ನದಿ ನೀರಿಗೆ, ಅಂತರ್ಜಲಕ್ಕೆ ತೊಂದರೆ ಇರಲಿಲ್ಲ .ಮತ್ತೆ ಮೂರ್ನಾಲ್ಕು ದಿನ ಮಳೆ ಬಾರದೇ ಹೋದರೂ ಸಮಸ್ಯೆ ಆಗುತ್ತದೆ, ಅಂತರ್ಜಲ ಕುಸಿಯುತ್ತದೆ ಎಂದು ಅನೇಕ ಹಿರಿಯರು ಪ್ರತಿಕ್ರಿಯೆ ನೀಡಿದರು.