ಸುದ್ದಿ ಕನ್ನಡ ವಾರ್ತೆ
ಅಂಕೋಲಾ : ರಸ್ತೆಗೆ ಅಡ್ಡ ಬಂದ ಆಕಳನ್ನು ತಪ್ಪಿಸಲು ಹೋಗಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರ ಪೈಕಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಉಳಿದವರಿಗೆ ಗಂಭೀರ ಗಾಯಗಳಾದ ಘಟನೆ ತಾಲೂಕಿನ ರಾ.ಹೆ 63ರ ಕಂಚಿನಬಾಗಿಲು ಬಳಿ ನಡೆದಿದೆ.

ಹುಬ್ಬಳ್ಳಿ ಮೂಲದವರಾದ ಕೆನರಾ ಬ್ಯಾಂಕ್ ನಿವೃತ್ತ್ ನೌಕರ ಸುರೇಶ ಶಂಕರ ರಾಣೆ (80) ಮೃತಪಟ್ಟವ. ಶೈಲಾ ಸುರೇಶ ರಾಣೆ, ಸಂಜೀವ ಸಾವಳು ನಾಯ್ಕ, ಶ್ವೇತಾ ಸಂಜೀವ ನಾಯ್ಕ ಇವರಿಗೆ ಗಾಯಗಳಾಗಿದ್ದು ಇವರನ್ನು ಅಂಕೋಲಾ ತಾಲೂಕಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿ ಕಾರವಾರ ಕಿಮ್ಸ್ಗೆ ಸಾಗಿಸಲಾಗಿದೆ.

ಇವರು ಕಾರವಾರದ ಸಂಬAಧಿಕರ ಮನೆಯಲ್ಲಿ ತಿಥಿ ಕಾರ್ಯ ಮುಗಿಸಿ ಮಾರುತಿ ಸುಜುಕಿ ಆಲ್ಟೋ ಕಾರಿನಲ್ಲಿ ನಾಲ್ವರು ಕುಟುಂಬಸ್ಥರು ಹುಬ್ಬಳ್ಳಿಗೆ ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 63 ರ ಕಂಚಿನಬಾಗಿಲು ಬಳಿಯ ತಿರುವಿನಲ್ಲಿ ರಸ್ತೆಗೆ ಅಡ್ಡಬಂದ ಆಕಳನ್ನು ತಪ್ಪಿಸಲು ಹೋಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಪಲ್ಟಿಯಾಗಿದೆ.

ಅಪಘಾತ ಸಂಭವಿಸುತ್ತಲೇ ಸ್ಥಳದಲ್ಲಿದ್ದ ಜನರು ನೆರವಿಗೆ ಬಂದು ಕಾರಿನಲ್ಲಿದ್ದವರ ರಕ್ಷಣೆ ಮಾಡಿದ್ದಾರೆ. ಸ್ಥಳಕ್ಕೆ ಪಿಎಸ್‌ಐ ಸುನೀಲ ಹುಳ್ಳೋಳ್ಳಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.