ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನ ಬಜಾರ್ ಕುಣಂಗ್ ಗ್ರಾಮ ಪಂಚಾಯತ ದಲ್ಲಿ ನಿರ್ಮಿಸಿದ ಬಿ ಎಸ್ ಎನ್ ಎಲ್ ಟವರ್ ಗೆ ಕಳೆದ ಎರಡು ವರ್ಷ ಗಳಿಂದ ಸಂಪರ್ಕ ನೀಡದೇ ಇಲಾಖೆ ಯವರು ಜನರಿಗೆ ಮೋಸಮಾಡುತ್ತಲೇ ಇದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ, ಗ್ರಾಮೀಣ ಜನರ ಸಮಸ್ಯೆ ಗಳು ಬಗೆಹರಿಯ ಬೇಕು ಜನರಿಗೆ ಜಗತ್ತಿನಲ್ಲಿ ಏನೇನು ನಡೆಯುತ್ತ
ದೆ ಎಂದು ತಿಳಿಯಬೇಕು, ಎಂಬ ಉದ್ದೇಶ ದಿಂದ ಗ್ರಾಮೀಣ ಜನತೆಗೆ ಕೇಂದ್ರ ಸರಕಾರ ಮೊಬೈಲ ಟವರ್ ನೀಡಿದೆ ಆದರೆ ಬಿ ಎಸ್ ಎನ್ ಎಲ್ ಇಲಾಖೆ ಮಾತ್ರ ಮೀನ ಮೇಷ ಏಣಿಸುತ್ತಿದೆ, ಕೇವಲ ಆರಂಭ ಶೂರತ್ವ ಮಾತ್ರ ತೋರಿಸುತ್ತಿದೆ, ಜನರ ಕಷ್ಟ ಇವರಿಗೇನು ಗೊತ್ತು ಎಂದು ಜನತೆ ದೂರಿದ್ದಾರೆ ಸರ್ಕಾರದ ಯಾವುದೇ ಕೆಲಸಕ್ಕೆ ಈಗ ಓ ಟಿ ಪಿ ಸಿಗಬೇಕು ಆದರೆ ಬಜಾರ್ ಕುಣಂಗ ಗ್ರಾಮ ಪಂಚಾಯತದ ಜನತೆ ಮೊಬೈಲ್ ನೆಟ್ವರ್ಕ್ ಬೇಕು ಎಂದರೆ 20 ಕಿ ಮೀ ದೂರದ ಕ್ಯಾಸ್ಟಲ್ ರಾಕ್ ಗೆ ಹೋಗಬೇಕು, ಹೀಗಾಗಿ ಇಲಾಖೆ ಯ ಕಾರ್ಯ ವೈಖರಿಗೆ ಜನ ರೋಸಿ ಹೋಗಿದ್ದಾರೆ.
ಕಳೆದ ಲೋಕ ಸಭಾ ಚುನಾವಣೆಯಲ್ಲಿ ಜನತೆ ತಮ್ಮ ಊರಿಗೆ ಮೊಬೈಲ್ ಟವರ್ ಆಗಿದೆ ಇನ್ನು ಉಳಿದ ಕೆಲಸ ಸಂಪರ್ಕ ಬೇಗನೇ ಆಗುತ್ತದೆ ಎಂದು ಖುಷಿಯಾಗಿ ಇದ್ದರು ಆದರೆ ಟವರ್ ಗೆ ಇದುವರೆಗೂ ಮೊಬೈಲ್ ನೆಟ್ವರ್ಕ್ ನೀಡಿಲ್ಲ ಇದು ಜನತೆಯ ಹಲವಾರು ಸಮಸ್ಯೆ ಗಳಿಗೆ ಕಾರಣ ವಾಗಿದೆ, ತಮ್ಮ ಮಕ್ಕಳು ದೂರದ ದಾಂಡೇಲಿ ಹಳಿಯಾಳ ಗಳಲ್ಲಿ ಶಿಕ್ಷಣ ಕ್ಕಾಗಿ ಶ್ರಮ ಪಡುತ್ತಿದ್ದರೆ ಮಕ್ಕಳ ಹೆತ್ತವರಿಗೆ ಮಕ್ಕಳ ಯೋಗ ಕ್ಷೇಮ ತಿಳಿಯಲೂ ಕೂಡ ಮೊಬೈಲ್ ನೆಟ್ವರ್ಕ್ ಇಲ್ಲದೇ ಪರದಾಡುತ್ತಿದ್ದಾರೆ,
ಸಮಸ್ಯೆಗೆ ಸ್ಪಂದಿಸ ಬೇಕಾದ ಗ್ರಾಮ ಪಂಚಾಯತ ತನ್ನ ಕಛೇರಿ ಯನ್ನೇ ಕ್ಯಾಸ್ಟಲ್ ರಾಕ್ ದಲ್ಲಿ ಇಟ್ಟು ಕೊಂಡು ಬಜಾರ್ ಕುಣಂಗ್ ಗ್ರಾಮ ಪಂಚಾಯತ ದ ಜನರೊಂದಿಗೆ ಚಲ್ಲಾಟ ಆಡುತ್ತಿದೆ ಎಂದು ಜನ ದೂರಿದ್ದಾರೆ. ಸರಕಾರದ ಯಾವ ಜನಪ್ರತಿನಿದಿಗಳು ಸ್ಪಂದಿಸುತ್ತಿಲ್ಲ ಇದಕ್ಕೆ ನಾವೇನು ಮಾಡಬೇಕು ಎಂದು ಗ್ರಾಮೀಣ ಜನರು ಆತಂಕಕ್ಕೆ ಇಡಾಗಿದ್ದಾರೆ. ಇನ್ನಾದರೂ ಬಿ ಎಸ್ ಎನ್ ಎಲ್ ತನ್ನ ಕೆಲಸ ಏನೆಂದು ತಿಳಿದು ಮಾಡಿದ ಕೆಲಸ ಮಣ್ಣು ಪಾಲಾಗುವ ಮೊದಲೇ ಸೋಲಾರ್ ಪ್ಲೇಟ್ ಗಳು ಕಳ್ಳ ಕಾಕರ ಪಾಲಾಗುವುದನ್ನು ತಪ್ಪಿಸಿ ಜನತೆಗೆ ಸಂಪರ್ಕ ನೀಡಬೇಕಾಗಿದೆ.
