Banner Ad

ಸುದ್ದಿ ಕನ್ನಡ ವಾರ್ತೆ

. ದಾಂಡೇಲಿ:ತಾಲೂಕಿನ ದಾಂಡೇಲಿ – ಅಳ್ಳಾವರ ರೈಲು ಸೇವೆ ಪುನರಾರಂಭದ ಉದ್ಘಾಟನಾ ಕಾರ್ಯಕ್ರಮವು ದಾಂಡೇಲಿ ನಗರದಲ್ಲಿ ಭವ್ಯವಾಗಿ ನಡೆಯಿತು.

Banner Ad

ಈ ಸಂದರ್ಭದಲ್ಲಿ ಮಾನ್ಯ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಸನ್ಮಾನ್ಯ ವಿ. ಸೋಮಣ್ಣ ಅವರು ರೈಲಿಗೆ ಹಸಿರು ನಿಶಾನೆ ತೋರಿಸಿ ಅಧಿಕೃತವಾಗಿ ರೈಲು ಸೇವೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಂಸದರಾದ ಸನ್ಮಾನ್ಯ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕರಾದ ಸನ್ಮಾನ್ಯ ಸುನಿಲ್ ಹೆಗಡೆ, ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಆರ್.ವಿ. ದೇಶಪಾಂಡೆ ಅವರು ಉಪಸ್ಥಿತರಿದ್ದು, ದಾಂಡೇಲಿ-ಅಳ್ಳಾವರ ರೈಲು ಸೇವೆ ಪುನರಾರಂಭವು ಈ ಭಾಗದ ಜನತೆಗೆ ಅನುಕೂಲಕರವಾಗಿದ್ದು, ವ್ಯಾಪಾರ, ಪ್ರವಾಸೋದ್ಯಮ ಹಾಗೂ ವಿದ್ಯಾರ್ಥಿಗಳಿಗೆ ಮಹತ್ವದ ಪ್ರಯೋಜನವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ಪಕ್ಷದ ಪದಾಧಿಕಾರಿಗಳು, ಸ್ಥಳೀಯ ಪ್ರಮುಖರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

Banner Ad