ಸುದ್ದಿ ಕನ್ನಡ ವಾರ್ತೆ
ಅಂಕೋಲಾ:ತಾಲೂಕಿನ ಕಳೆದ ಮೂರು ವರ್ಷಗಳ ಹಿಂದೆ ಮಕ್ಕಳ ದಿನಾಚರಣೆಯ ಶುಭ ಸಂದರ್ಭದಲ್ಲಿ ಜನ್ಮತಾಳಿದ ಸಮರ್ಪಣಾ ವಿಶ್ರಾಂತ ಶಿಕ್ಷಕ ಬಳಗದ ಸಂಸ್ಥಾಪನಾ ದಿನವನ್ನು ಶನಿವಾರ ಅಂಕೋಲಾದ ಸಾಲು ಮರದ ತಿಮ್ಮಕ್ಕನ ಉದ್ಯಾನವನದಲ್ಲಿ ನೆಹರುರವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವದರ ಮೂಲಕ ಉದ್ಘಾಟಿಸಲಾಯಿತು.
ವಿಶ್ರಾಂತ ಶಿಕ್ಷಕ ಬಳಗದ ಕಾರ್ಯದರ್ಶಿ ಗೋಪಾಲ ನಾಯಕರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪಾಂಡುರಂಗ ನಾಯಕ,ಎಸ್.ಆರ್.ನಾಯಕ,ಹೊನ್ನಪ್ಪ ನಾಯಕ, ಸುಕ್ರು ಆಗೇರ,ಮುಂತಾದವರು ಕಾರ್ಯಕ್ರಮ ಉದ್ದೇಶಿಸಿ ಮೆಚ್ಚುಗೆಯ ಮಾತುಗಳನ್ನಾಡಿದರು.ಬಳಗದ ಅಧ್ಯಕ್ಷರಾದ ರಮೇಶ ನಾಯಕರು ಶಿಕ್ಷಕರ ಜೊತೆಯಲ್ಲಿ ನಗೆಹನಿ ಕಾರ್ಯಕ್ರಮ ನಡೆಸಿ ಮಾತನಾಡಿದರು.ಬಳಗದ ನಿಕಟ ಪೂರ್ವ ಅಧ್ಯಕ್ಷರಾದ ಎನ್.ವಿ.ನಾಯಕರು ಸಮರ್ಪಣಾ ಬಳಗವು ಮುಂದೆ ಮಾಡಬೇಕಾದ ಜನಪರ ಕಾರ್ಯಗಳನ್ನು ಪ್ರಸ್ತಾವಿಸಿದರು.
ಕಾರ್ಯಕ್ರಮದಲ್ಲಿ ರಘುವೀರ ನಾಯಕ, ಪಿ. ವಿ.ಶೇಟ್, ನಾಗೇಶ ನಾಯಕ, ಗಣಪತಿ ನಾಯಕ, ದೇವಾನಂದ ನಾಯಕ, ಅಚ್ಯುತ್ ನಾಯಕ, ಗೋಪಾಲಕೃಷ್ಣ ನಾಯಕ ಮುಂತಾದವರು ಉಪಸ್ಥಿತರಿದ್ದರು.
