ಸುದ್ದಿ ಕನ್ನಡ ವಾರ್ತೆ

ಕಾರವಾರ:ನಗರದ ಬಿಲ್ಟ್ ವೃತ್ತದ ಸಮೀಪ ರಾಷ್ಟ್ರೀಯ ಹೆದ್ದಾರಿಯ 66ರ ಮೇಲ್ಸೇತುವೆಯ ಕೆಳಗಡೆ ನಿಲ್ಲಿಸಿದ ಹಾಲು ಪೂರೈಸುವ 407 ಗೂಡ್ಸ್ ವಾಹನಕ್ಕೆ ಬೆಂಕಿ ಹೊತ್ತಿ ಉರಿದ ಘಟನೆ ನಡೆದಿದೆ.

ಕಾರವಾರದ ನಗರ ಸೇರಿದಂತೆ ವಿವಿದೆಡೆ ಹಾಲನ್ನು ಪೂರೈಸುವ ಈ ಗೂಡ್ಸ್ ವಾಹನವು ತಾಮ್ಸೆವಾಡಾದ ಸಂತೋಷಿ ಚಿಪ್ಕರ್ ಎಂಬುವವರಿಗೆ ಸೇರಿದ್ದು ಎಂಬ ಮಾಹಿತಿ ಇದೆ. ಹೆದ್ದಾರಿಯ ರಸ್ತೆಯಲ್ಲಿ ಬೆಂಕಿ ಹೊತ್ತಿ ದಟ್ಟ ಹೊಗೆ ಆವರಿಸಿದರಿಂದ ಕೆಲಕಾಲ ಹೆದ್ದಾರಿಯ ರಸ್ತೆಯ ಮೇಲೆ ಓಡಾಡುವ ವಾಹನ ಸವಾರರು ಆತಂಕಕ್ಕೆ ಒಳಗಾದರು.ವಾಹನದ ಬೆಂಕಿ ಆರಿಸುವ ಪ್ರಯತ್ನ ಸ್ಥಳೀಯರು ಮಾಡಿದರು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ನಡೆಸಿ ಬೆಂಕಿಯನ್ನು ಆರಿಸಿದರು.