ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಯರಮುಖದ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಸಾವಯವ ಕೃಷಿಯ ಕುರಿತ ಮಾಹಿತಿ ಕಾರ್ಯಾಗಾರ ಯಶಸ್ವಿ ಸಂಪನ್ನಗೊಂಡಿತು.

ಕಾರ್ಯಾಗಾರದಲ್ಲಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ರಮೇಶ ತುರುಮುರಿಯವರು ಪರಂಪರಾಗತ ಕೃಷಿ ವಿಕಾಸ ಯೋಜನೆಯ ಕುರಿತು ಉಪಯುಕ್ತ ಮಾಹಿತಿ ನೀಡಿದರು. ಸ್ಕೊಡ್ ವೆಸ್ ಸಂಸ್ಥೆಯ ಡಾ.ವಿನಾಯಕ ಪೈ ಮಾಹಿತಿ ಕಾರ್ಯಾಗಾರ, ಯೋಜನೆಯ ಅನುಷ್ಠಾನ,ರೈತರ ಪಾತ್ರದ ಕುರಿತು ಮಾತನಾಡಿದರು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶಂಕರ ಹೆಗಡೆಯವರು ಕೃಷಿಗೆ ಅತೀ ಮುಖ್ಯವಾದ ಮಣ್ಣಿನ ಮಹತ್ವ,ಸಂರಕ್ಷಣೆ,ಅದರಲ್ಲಿ ಪೋಷಕಾಂಶಗಳ ಮಾಹಿತಿ,ಸಾವಯವ ಕೃಷಿಯ ಮಹತ್ವ ಕುರಿತು ವಿವರವಾದ ಮಾಹಿತಿ ನೀಡಿದರು. ಇನ್ನೊರ್ವ ಸಂಪನ್ಮೂಲ ವ್ಯಕ್ತಿಗಳಾದ ಡಿ.ಜೆ.ಪಟಗಾರ ನಿವೃತ್ತ ಕೃಷಿ ಅಧಿಕಾರಿಗಳು ಗೊಬ್ಬರಗಳನ್ನು ತಯಾರಿಸುವ, ಬಳಸುವ,ಗುಣಮಟ್ಟ ಇನ್ನಿತರ ಮಾಹಿತಿಯನ್ನು ನೀಡಿದರು. ಕಾರ್ಯಾಗಾರದಲ್ಲಿ ಭಾಗವಹಿಸಿದ ರೈತರಿಗೆ ತರಕಾರಿ ಬೀಜದ ಕಿಟ್ ನೀಡಲಾಯಿತು.

ಕಾರ್ಯಾಗಾರದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಅರುಣ ದೇಸಾಯಿ,ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಸುದರ್ಶನ ಭಾಗವತ,ಕೃಷಿಕ ಸಮಾಜದ ಆರ್.ಆರ್.ಹೆಗಡೆ,ಪತ್ರಿಕಾ ಮಾಧ್ಯಮದ ಅನಂತ ದೇಸಾಯಿ, ಟಿ.ಕೆ.ದೇಸಾಯಿ, ಇನ್ನಿತರ ಪ್ರಮುಖರು ರೈತ ಬಾಂಧವರು ಇದ್ದರು.ತೋಟಗಾರಿಕಾ ಇಲಾಖೆಯ ಯಲ್ಲಾರಲಿಂಗ್, ಪರಂಪರಾಗತ ಕೃಷಿ ವಿಕಾಸ ಯೋಜನೆಯ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ ಅಮರ ಭಾಗವತ,ಭಾಸ್ಕರ ನಾಯ್ಕ ಕಾರ್ಯಾಗಾರದ ಯಶಸ್ಸಿಗೆ ಸಹಕಾರ ನೀಡಿದರು.