ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ಜಿಲ್ಲಾ ಪಂಚಾಯತ ಉತ್ತರಕನ್ನಡ,ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ,ಕ್ಷೇತ್ರ ಸಂಪನ್ಮೂಲ ಕೇಂದ್ರ ಜೋಯಿಡಾ,ಸಮೂಹ ಸಂಪನ್ಮೂಲ ಕೇಂದ್ರ ನಾಗೋಡಾ ಶೈಕ್ಷಣಿಕ ಜಿಲ್ಲೆ ಶಿರಸಿ(ಉ.ಕ)ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ,ಬಾಪೇಲಿಕ್ರಾಸ್ ಇವರ ಸಹಯೋಗದೊಂದಿಗೆ ನಾಗೋಡಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ 2025-26 ರ ಕಾರ್ಯಕ್ರಮ ದಿನಾಂಕ:07-11-2025 ರ ಶುಕ್ರವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಪೇಲಿಕ್ರಾಸ್ ನಲ್ಲಿ ಯಶಸ್ವಿಯಾಗಿ ನಡೆಯಿತು.
ವೇದಿಕೆಯ ಕಾರ್ಯಕ್ರಮದಲ್ಲಿ ಶಿವಾನಂದ ಪಾಟೀಲ,ಮೋಹನ ಮಾವುಸ್ಕರ,ಸುಭಾಸ ಮಾಂಜ್ರೇಕರ,ಶ್ರೀಕಾಂತ ಛಲವಾದಿ,ಶಶಿಕಾಂತ ಹೂಲಿ, ಗಣಶ್ಯಾಮ ಬೊಂಡೇಲಕರ, ಸಂದೀಪ ಮಿರಾಶಿ,ರೋಹಿದಾಸ ಮಡಿವಾಳ,ರತ್ನಾ ಭಟ್ಟ,ಶಂಕರ ವೇಳಿಪ,ಗ್ರಾಮ ಪಂಚಾಯತ ಸದಸ್ಯರುಗಳು,ಎಸ್.ಡಿ.ಎಮ್.ಸಿ ಸದಸ್ಯರು ಇದ್ದರು. ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಥೆ ಹೇಳುವುದು,ಕಂಠಪಾಠ,ಧಾರ್ಮಿಕ ಪಠಣ,ಚಿತ್ರಕಲೆ,ಕ್ಲೇ ಮಾಡೆಲಿಂಗ್, ಅಭಿನಯ ಗೀತೆ,ದೇಶ ಭಕ್ತಿಗೀತೆ, ಭಕ್ತಿ ಗೀತೆ,ಛದ್ಮವೇಷ,ಕವನ ವಾಚನ,ಪ್ರಬಂಧ ಸ್ಪರ್ಧೆ, ಮಿಮಿಕ್ರಿ,ಆಶು ಭಾಷಣ ಇನ್ನಿತರ ಸ್ಪರ್ಧೆಗಳಲ್ಲಿ ಕ್ಲಸ್ಟರಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಗಣ್ಯರು ವಿತರಿಸಿದರು. ಸಂಘಟಕರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡಿದ್ದರು, ಪಾಲಕರು,ಪೋಷಕರು ಸಹಕಾರನೀಡಿದರು.ಸಹ ಶಿಕ್ಷಕಿಯಾದ ಕಾಂಚಾನ ನಾಯ್ಕ ಕಾರ್ಯಕ್ರಮದಲ್ಲಿ ಸ್ವಾಗತಿಸಿ, ನಿರೂಪಿಸಿ,ವಂದಿಸಿದರು.
