Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ. ತಾಲೂಕಾ ಕೇಂದ್ರದ ಬಿ. ಜಿ. ವಿ. ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ. ಯು. ಸಿ. ಮಕ್ಕಳ ಬಿಳ್ಕೋಡುಗೆ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಗ್ರಾ. ಪಂ. ಉಪಾಧ್ಯಕ್ಷ ಸಂತೋಷ ಮಂಥೇರೋ ಮಾತನಾಡಿ, ಶಿಕ್ಷಣದಿಂದ ಮನುಷ್ಯನ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಉತ್ತಮ ವ್ಯಕ್ತಿಯಿಂದ ಉತ್ತಮ ಸಮಾಜ. ನಿವೆಲ್ಲ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿಗಳಾಗಿ, ಭವಿಷ್ಯದ ಒಳ್ಳೆಯ ಸಮಾಜ ನಿರ್ಮಿಸಬೇಕು ಎಂದು ಕರೆ ನೀಡಿದರು.

Banner Ad

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಎಮ್. ಕೆ. ಶೆಟ್ಟಿ, ವಿದ್ಯಾರ್ಥಿ ಜೀವನದಲ್ಲಿ ಗಳಿಸಿದ ವಿದ್ಯೆ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ. ಮೋಬೈಲನ್ನು ಶೈಕ್ಷಣಿಕ ಜ್ಞಾನಕ್ಕಾಗಿ ಮಾತ್ರ ಬಳಸಿ, ಪರೀಕ್ಷೆಯ ಅಂತಿಮ ಘಟ್ಟದಲ್ಲಿರುವ ನೀವು ಸಮಯ ವ್ಯರ್ಥಮಾಡದೆ ಓದಿ, ಉತ್ತಮ ಪಲಿತಾಂಶ ಪಡೆಯುವ ಮೂಲಕ, ನಿಮ್ಮ ಪಾಲಕರಿಗು, ನಮ್ಮ ಕಾಲೇಜಿಗೂ ಕೀರ್ತಿ ತರುವಂತವರಾಗಿ, ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದರು.

ಈ ಸಂರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶ್ಯಾಮ ಪೊಕಳೆ, ಮರಾಠಾ ಸಮಾಜದ ಅಧ್ಯಕ್ಷ ಚಂದ್ರಕಾಂತ ದೇಸಾಯಿ, ಉಪನ್ಯಾಸಕರಾದ ಪಿ. ಜಿ. ನಾಯಕ, ಆನಂದು ಗೌಡ, ಶಿವಾಜಿ ಜೋಮಣ್ಣ ಮಾತನಾಡಿ ಪರೀಕ್ಷೆ ಎದುರಿಸುವ ಮಕ್ಕಳಿಡೆ ಮಾರ್ಗದರ್ಶನ ನೀಡಿದರು.
ಸನ್ಮಾನ :- ವೇದಿಕೆಯಲ್ಲಿ ಕ್ರೀಕೇಟ ಆಟದಲ್ಲಿ ಯುನವರಸಿಟಿ ಬ್ಲೂ. ಆದ ಹಳೆಯ ವಿದ್ಯಾರ್ಥಿ ಸಮರ್ಥ ಸುನೀಲ ಪಾಟೀಲ್ ಹಾಗೂ ಮಕ್ಕಳಿಗೆ ನೃತ್ಯ ಕಲಿಸಿದ್ದ ಐಶ್ವರ್ಯ ಹಳದನಕರ ರವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕಾಲೇಜು ಸ್ಥಳಿಯ ಸಮಿತಿ ಅಧ್ಯಕ್ಷ ಮನೋಹರ ದೇಸಾಯಿ, ಸುನೀಲ ಪಾಟೀಲ್, ವಿದ್ಯಾರ್ಥಿ ಪ್ರತಿನಿದಿ ಸಂಜಯ ನಾಯ್ಕ, ಉಪಸ್ಥಿತರಿದ್ದರು.
ಸಾಂಸ್ಕೃತಿಕ ವಿಭಾಗದ ಪ್ರಕಾಶ ತಗಡಿನಮನೆ ಪ್ರಾಸ್ಥಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ರಜಿನಾ ಫರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರೆ, ನಯನಾ ಗಾವಡಾ ಸ್ವಾಗತಿಸಿ ಸ್ಮ್ರತಿ ಮಿರಾಶಿ ವಂದಿಸಿದರು.

Banner Ad