ಸುದ್ದಿ ಕನ್ನಡ ವಾರ್ತೆ
ಶಿರಸಿ: ಗಾಳಿ ಮಳೆಯನ್ನೂ ಲೆಕ್ಕಿಸದೇ ಕೆಲಸ ಮಾಡಿದ ಹೆಸ್ಕಾಂನ ಬಿಸಲಕೊಪ್ಪ ಭಾಗದ ಲೈನ್ ಮೆನ್ ಆಗಿ ಕೆಲಸ ಮಾಡುತ್ತಿರುವ ಲಕ್ಷ್ಮೀಕಾಂತ ನಾಯ್ಕ ಅವರಿಗೆ ದೆಹಲಿಯಲ್ಲಿ ನಡೆಯಲಿರುವ ಲೈನ್ ಮೆನ್ ದಿವಸ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ಕರ್ನಾಟಕದಿಂದ ಐವರು ಈ ಪುರಸ್ಕಾರಕ್ಕೆ ಆಯ್ಕೆ ಆಗಿದ್ದು, ಅದರಲ್ಲಿ ಲಕ್ಷ್ಮೀಕಾಂತ ಕೂಡ ಒಬ್ಬರಾಗಿದ್ದಾರೆ. ಮಾರ್ಚ ೪ರಂದು ದೆಹಲಿಯ ಇಂಡಿಯನ್ ಹೆಬಿಟೈಟ್ ಸೆಂಟರನಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ.