ಸುದ್ದಿ ಕನ್ನಡ ವಾರ್ತೆ
ಶಿರಸಿ: ಉತ್ತರ ಕನ್ನಡ ಜಿಲ್ಲಾ
ಬಿಜೆಪಿ ಘಟಕದ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಎನ್ ಎಸ್ ಹೆಗಡೆ ಕರ್ಕಿ ಪುನರಾಯ್ಕೆಯಾಗಿದ್ದಾರೆ.
ಬುಧವಾರ ನಗರದ ದೀನ್ ದಯಾಳ ಭವನದಲ್ಲಿ ಆಯ್ಕೆ ಘೋಷಿಸಿದ ಬಿಜೆಪಿ ಜಿಲ್ಲಾ ಚುನಾವಣಾಧಿಕಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಕೆ.ಸಿದ್ದರಾಮಣ್ಣ, ಎನ್. ಎಸ್ ಹೆಗಡೆ ಅವರು ಮುಂದಿನ ಮೂರು ವರ್ಷದ ಅವಧಿಗೆ ಆಯ್ಕೆ ಮಾಡಲಾಗಿದ್ದು ಬರಲಿರುವ ಚುನಾವಣೆ ಎದುರಿಸಲು ಪಕ್ಷ ಸದ್ರಢಗೊಳಿಸುವಂತೆ ಸೂಚನೆ ನೀಡಿದರು.
ಈ ವೇಳೆ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ, ಜಿಲ್ಲಾಧ್ಯಕ್ಷ ಎನ್. ಎಸ್. ಹೆಗಡೆ ಕರ್ಕಿ, ಪ್ರಮುಖರಾದ ಆರ್. ಡಿ ಹೆಗಡೆ, ನಗರ ಮಂಡಲ ಅಧ್ಯಕ್ಷ ಆನಂದ ಸಾಲೇರ್, ಮಾಜಿ ಶಾಸಕ ವಿವೇಕಾನಂದ ವೈದ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಮಾಜಿ ಅಧ್ಯಕ್ಷ ಎಂ.ಜಿ.ನಾಯ್ಕ, ಕಚೇರಿ ಕಾರ್ಯದರ್ಶಿ ಶ್ರೀರಾಮ ನಾಯ್ಕ ಇತರರಿದ್ದರು.