ಸುದ್ದಿ ಕನ್ನಡ
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶಾಲ್ಮಲಾ ನದಿ ತೀರದಲ್ಲಿ ಸುವರ್ಣವಲ್ಲಿ ಯಾತ್ರಿ ನಿವಾಸದಲ್ಲಿ ನಡೆದ ಸಂತರ ಮಹಾಸಭೆಯಲ್ಲಿ ಬೇಡ್ತಿ ಹಿರೇವಡ್ಲಟ್ಟೆ, ವರದಾ ನದಿ ಜೋಡಣೆ ಯೋಜನೆ ಕುರಿತು ವಿವರ ಸಂವಾದ ನಡೆಸಲಾಯಿತು. ಸ್ವರ್ಣವಲ್ಲಿ ಮಹಾಸಸ್ಥಾನದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು.
ಪಶ್ಚಿಮ ಘಟ್ಟಕ್ಕೆ ಹಾನಿಯಾಗಬಾರದು…..
ಬೇಡ್ತಿ ವರದಾ ನದಿ ಜೋಡಣೆ ಅವೈಜ್ಞಾನಿಕವಾದದು ಕಾರ್ಯಸಾಧ್ಯತಾ ವರದಿ ದೋಷಪೂರಿತವಾಗಿದೆ ಎಂದು ಸೋಂದ ಸ್ವರ್ಣವಲ್ಲಿ ಮಠಾಧೀಶರಾದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ನುಡಿದಿದ್ದಾರೆ. ಯೋಜನೆಯ ಪರಿಸರ ವಿನಾಶ ಮಾಡುವುದಾಗಿದೆ ಎಂದು ಅವರು ಬಲವಾಗಿ ವಿರೋಧಿಸಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶಾಲ್ಮಲಾ ನದಿ ತೀರದಲ್ಲಿ ಸುವರ್ಣವಲ್ಲಿ ಯಾತ್ರಿ ನಿವಾಸದಲ್ಲಿ ನಡೆದ ಸಂತರ ಮಹಾಸಭೆಯಲ್ಲಿ ಬೇಡ್ತಿ , ವರದಾ ನದಿ ಜೋಡಣೆ ಯೋಜನೆ ಕುರಿತು ವಿವರ ಸಂವಾದ ನಡೆಸಲಾಯಿತು
ಮಲೆನಾಡು ಬಯಲು ಸೀಮೆ ಎಲ್ಲೆಡೆ ರೈತರು ಸಂಕಷ್ಟದಲ್ಲಿದ್ದಾರೆ. ವಸ್ತು ನಿಷ್ಠ ವೈಜ್ಞಾನಿಕ ಚರ್ಚೆ ವಾದ ನಮ್ಮದು. ಪಶ್ಚಿಮ ಘಟ್ಟ ಧ್ವಂಸ ಆಗಬಾರದು. ಎತ್ತಿನಹೊಳೆಯ ದುರಂತ ಇಲ್ಲಿ ಕೂಡ ಆಗಬಾರದು ಎಂದು ಸೋಂದ ಸ್ವರ್ಣವಲ್ಲಿ ಶ್ರೀಗಳು ನುಡಿದರು.
ಸೋಂದಾ ಜೈನ ಮಠದ ಪೂಜ್ಯ ಭಟ್ಟಾಕಲಂಕ ಭಟ್ಟರಕ ಸ್ವಾಮೀಜಿಯವರು_ಮಲೆನಾಡಿನ ಪರಿಸ್ಥಿತಿ ಗಂಭೀರವಾಗಿದೆ. ಕರಾವಳಿಯಲ್ಲಿ ಉಪ್ಪು ನೀರು ನದಿಗೆ ನಗುತಿದೆ. ಬೃಹತ್ ಯೋಜನೆಗಳಿಂದ ನಿಸರ್ಗ ಮಠ ಮಂದಿರ ಸಂಸ್ಕೃತಿಗೆ ಪೆಟ್ಟು ಬಿದ್ದಿದೆ ಎಂದು ಯೋಜನೆಗೆ ವಿರೋಧ ವ್ಯಕ್ತಪಡಿಸಿದರು
ಬಾಳೆಹೊಸೂರು ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳು_ಹಾವೇರಿ ಜಿಲ್ಲೆಯ ಸಂತರನ್ನು ಪ್ರತಿನಿಧಿಸಿ ಮಾತನಾಡಿ, ಹಾವೇರಿ ಗದಗ ಜಿಲ್ಲೆ ರೈತರಿಗೆ ಬೆಡ್ತಿ ನದಿಯ ಹೆಚ್ಚುವರಿ ನೀರು ಕೊಡಿ. ಇಲ್ಲಿನ ಪರಿಸ್ಥಿತಿ ನೋಡಲು ಬಂದಿದ್ದೇವೆ. ಆದರೆ ಸ್ವರ್ಣವಲ್ಲಿ ಶ್ರೀಗಳ ಜೊತೆ ಸಮಾಲೋಚನೆ ನಡೆಸಿಯೇ ಮುಂದಿನ ಹೆಜ್ಜೆ ಇಡಲಿದ್ದೇವೆ ಎಂದರು.
ವಿಜ್ಞಾನಿ ಡಾ. ಬಾಲಚಂದ್ರ ಸಾಯಿ ಮನೆ, ಪರಿಸರ ತಜ್ಞ ಶಿವಾನಂದ ಕಳವೆ, ಅನಂತ ಹೆಗಡೆ ಆಶಿಸರ, ಮತ್ತಿತರರು ಮಾತನಾಡಿ ವಿನಾಶಕ್ಕಾಗಿ ಯೋಜನೆ ಇದಾಗಿದೆ ಎಂದು ಅಂಕಿ ಸಂಖ್ಯೆಯೊಂದಿಗೆ ವಿವರ ನೀಡಿದರು.
ಸೋದೆ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳು, ಕರ್ಕಿ ಮಠದ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮಿಗಳು, ಶ್ರೀಮನ್ನಲೆ ಮಾವು ಮಠದ ಮಾಧವಾನಂದ ಭಾರತಿ ಸ್ವಾಮಿಗಳು, ಶಿರಳಗಿಯ ಬ್ರಹ್ಮಾನಂದಭಾರತಿ ಸ್ವಾಮಿಗಳು, ಜಡೆ ಮಠದ ಮಹಾಂತ ಸ್ವಾಮಿಗಳು, ಹಾವೇರಿ ಜಿಲ್ಲೆಯ 20ಕ್ಕೂ ಹೆಚ್ಚು ಮಠಾಧೀಶರು ಆಗಮಿಸಿದ್ದರು.
ಯಲ್ಲಾಪುರ ಬೇಡ್ತಿ ಸೇತುವೆ ಬಳಿ ನದಿ ತೀರಕ್ಕೆ ತೆರಳಿದ ಹಾವೇರಿ ಜಿಲ್ಲೆಯ ಮಠಾಧೀಶರು ನದಿ ಯನ್ನು ಖುದ್ದಾಗಿ ವೀಕ್ಷಣೆ ಮಾಡಿದರು. ಸುತ್ತಮುತ್ತಲಿನ ಹಳ್ಳಿಗಳ ಜನರು ಬೇಡ್ತಿಯಲ್ಲಿ ನೀರೇ ಇಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟರು.
