ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ಜಿಲ್ಲಾ ಪೋಲಿಸ್ ಇಲಾಖೆಯ ಪ್ರಮುಖ ಅಧಿಕಾರಿ ಎಸ್ ಪಿ ಯವರು ಮತ್ತು ದಾಂಡೇಲಿ ಯ ಡಿ ವಾಯ್ ಎಸ್ ಪಿ ರವರ ಆದೇಶದಂತೆ ಹೆಲ್ಮೆಟ್ ಜಾಗೃತಿ ಜಾತಾ ಅಭಿಯಾನವನ್ನು ಸೋಮವಾರ ಜೋಯಿಡಾ ದಲ್ಲಿ ನಡೆಸಲಾಯಿತು .

ಈ ಹೆಲ್ಮೆಟ್ ಜಾತ ಅಭಿಯಾನದ ನೇತೃತ್ವವನ್ನು ಜೋಯಿಡಾ ಸಿಪಿಐ ಚಂದ್ರಶೇಖರ ಹರಿಹರ ,ಜೋಯಿಡಾ ತಹಶೀಲ್ದಾರ ಮಂಜುನಾಥ ಮುನ್ನೊಳ್ಳಿ ಪಿಎಸ್ಐ. ಮಹೇಶ ಮಾಳಿ ಪಿಎಸ್ಐ ಮಹಾದೇವಿ ನೈಕೋಡಿ. ವಹಿಸಿದ್ದರು.

ಅಗ್ನಿಶಾಮಕ ದಳದ ಸಿಬ್ಬಂದಿಗಳು ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿ ಸಹಕಾರ ನೀಡಿದರು ಈ ಜಾಗೃತಿ ಸಂದರ್ಭದಲ್ಲಿ ವಾಹನ ಸವಾರರಿಗೆ ಅದರಲ್ಲೂ ಬೈಕ್ ಸವಾರರಿಗೆ ಹೆಲ್ಮೆಟ್ ಎಷ್ಟು ಮುಖ್ಯ ಎಂಬ ಅರಿವನ್ನು ಮೂಡಿಸಲಾಯಿತು ಹೆಲ್ಮೆಟ್ ಧರಿಸದ ಸವಾರರಿಗೆ ಹೂಮಾಲೆ ಹಾಕಿ ಸನ್ಮಾನಿಸಲಾಯಿತು.ಇದರಿಂದ ಜನರಲ್ಲಿ .ಜಾಗೃತಿ ಯಾಗಲಿ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಲಿ ಜೀವ ಅಪಾಯದಿಂದ ಪಾರಾಗಲಿ ಎಂಬ ಉದ್ದೇಶ ದಿಂದ ಈ ಜಾತಾ ಮಾಡಲಾಯಿತು ಎಂದು ಪಿಎಸ್ಐ ಮಹೇಶ ಮಾಳಿ ತಿಳಿಸಿದರು.