ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ಶ್ರೀ ವಿ ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ವಿಸ್ತರಣಾ ಶಾಖೆ ಜೋಯಿಡಾ ವಿಶ್ವ ಸೇವಾ ಸಮಿತಿ ಪಿಡಿಜಿ ರೋ ಸುಬ್ರಾವ್ ಕಾಸರಕೋಡು ಮೆಮೋರಿಯಲ್ ರೋಟರಿ ಚಾರಿ ಟೇಬಲ್ ಆಸ್ಪತ್ರೆ ರೋಟರಿ ಕ್ಲಬ್ ಶಿರಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ ಜಿಲ್ಲಾ ಅಂದತ್ವ ನಿವಾರಣ ವಿಭಾಗ ಕಾರವಾರ ತಾಲೂಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೋಯಿಡಾ ತಾಲೂಕ ಆಸ್ಪತ್ರೆ ಜೋಯಿಡಾ ಇವರುಗಳ ಸಂಯುಕ್ತ ಆಶ್ರಯದಲ್ಲಿ *ಉಚಿತ ಕಣ್ಣಿನ ಪೊರೆ ತಪಾಸನೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರ ಕಾರ್ಯಕ್ರಮವನ್ನು ತಾಲೂಕ ಆಸ್ಪತ್ರೆ ಜೋಯಿಡಾ ದಲ್ಲಿ ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮದ ಉದ್ಘಾಟಕ ಡಾಕ್ಟರ್ ಎ ಜಿ ವಸ್ತ್ರದ್ , ಕಣ್ಣಿನ ತಜ್ಞರು ಆರ್ ಸಿ ಎಚ್ ಆಸ್ಪತ್ರೆ ಸಿರಸಿಇವರುಉದ್ಘಾಟಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷರಾದ ಡಾಕ್ಟರ್ ವಿಜಯಕುಮಾರ್ ಕೊಚ್ಚರಿಗೆ ಆಡಳಿತಾಧಿಕಾರಿಗಳು ತಾಲೂಕ ಆಸ್ಪತ್ರೆ ಜೋಯಿಡಾ ಇವರು ಶಿಬಿರದ ಯೋಜನೆಗಳು ಮತ್ತು ಮತ್ತು ಕಣ್ಣಿನ ಮಹತ್ವ ಕುರಿತು ಮಾತನಾಡಿದರು ಗಿರೀಶ್ ದಾರೆಶ್ವರ್ ಶಿಬಿರದ ಸಂಯೋಜಕರು ಆರ್ ಸಿ ಎಚ್ ಆಸ್ಪತ್ರೆ ಶಿರಸಿ ಶಸ್ತ್ರ ಚಿಕಿತ್ಸೆ ಶಿಬಿರದ ನಿಯಮಗಳು ಶಸ್ತ್ರ ಚಿಕಿತ್ಸೆ ಕುರಿತು ಮಾತನಾಡಿದರು ಅಶೋಕ್ ಸೂರ್ಯವಂಶಿ ಯೋಜನಾಧಿಕಾರಿಗಳು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಜೋಯಿಡಾಇವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು .
ವೇದಿಕೆ ಮೇಲೆ ಸಂಜುವರ್ಮ ಜೋಶಿ ಯೋಜನಾಧಿಕಾರಿಗಳು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ದಾಂಡೇಲಿ ಉಪಸ್ಥಿತರಿದ್ದರು. ಮಂಜುನಾಥ್ ಸಾವಂತ್ ಸಮುದಾಯ ಸಂಘಟಕರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವಿಸ್ತರಣಾ ಶಾಖೆ ಜೋಯಿಡಾ ಆಯೋಜಿಸಿ ವಂದಿಸಿದರು ಒಟ್ಟು 79 ಫಲಾನುಭವಿಗಳು ಭಾಗವಹಿಸಿದ್ದರು ಅದರಲ್ಲಿ 15 ಜನರು ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾಗಿರುತ್ತಾರೆ.