ಸುದ್ದಿ ಕನ್ನಡ ವಾರ್ತೆ

ಜೋಯಿಡಾ…ಇಂದುಬಿಜೆಪಿ ಮಂಡಳ ಮಾಸಿಕ ಕಾರ್ಯಕಾರಣಿ ಸಭೆಯನ್ನು ಜೋಯಿಡಾ ಮಂಡಲದ ರಾಮನಗರ ಮಹಾಶಕ್ತಿ ಕೇಂದ್ರದ ಅಖೇತಿ ಅನ್ಮೋಡ ಸಮುದಾಯ ಭವನದಲ್ಲಿ ಮಂಡಳದ ಅಧ್ಯಕ್ಷರಾದ ಶಿವಾಜಿ ಗೋಸಾವಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಬಿಜೆಪಿ ನಾಯಕರು ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸುನಿಲ್ ಹೆಗಡೆ ಅವರ ಮಾರ್ಗದರ್ಶನದಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಯಿತು ನಾಯಕರಾದಂತಹ ಸುನಿಲ್ ಹೆಗಡೆ ಅವರು ಪಕ್ಷದ ಸಂಘಟನೆ ಬಗ್ಗೆ ಮಾತನಾಡುತ್ತ ದೇಶ ಮೊದಲು ಜನಸೇವೆಯೇ ನಮ್ಮಗುರಿ ಇಂತಹ ಮಹಾನ್ ಸಂಕಲ್ಪ ದೊಂದಿಗೆ ಮೋದಿಜಿಯವರ 12 ವರ್ಷದ ಕಾರ್ಯ ವನ್ನು ಮನೆ ಮನೆಗೆ ತಲುಪಿಸುವುದು ನಾವು ನಡೆಯುವ ದಾರಿಯಾಗಿದೆ. ಪಕ್ಷದ ಯಾವುದೇ ಜವಾಬ್ದಾರಿ ಮತ್ತು ಹೆಸರು ದೊಡ್ಡದಲ್ಲ ಕಾರ್ಯಕರ್ತರ ಮತ್ತು ಜನರ ಕಾರ್ಯವೇ ದೊಡ್ಡ ಜವಾಬ್ದಾರಿ ಎಲ್ಲಾ ಕಾರ್ಯಕರ್ತರು ನಮ್ಮ ಬೆನ್ನೆಲುಬು ಮುಂಬರುವ ಚುನಾವಣೆಯನ್ನು ಹೇಗೆ ಗೆಲ್ಲುವುದು ಯಾವ ರಣ ತಂತ್ರವನ್ನು ರೂಪಿಸುವುದು ಎಂಬ ಬಗ್ಗೆ ಮಾರ್ಗದರ್ಶನ ನೀಡಿದರು
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ರಾಮನಗರದಿಂದ ಸಂತೋಷ್ ಗೋಂದಳಿ ಮತ್ತು ತಿನ್ನಿ ಘಾಟ್ ದೇವಳ್ಳಿ ಯಿಂದ ನಾಮದೇವ ಪರಬ್ ಸೇರ್ಪಡೆಗೊಂಡರು

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಸಂತೋಷ್ ರೆಡ್ಕರ್ ಜಿಲ್ಲಾ ಕಮಿಟಿಯ ದೀಪಕ್ ದೇಸಾಯಿ ಮಾಜಿ ಶಕ್ತಿ ಕೇಂದ್ರಅಧ್ಯಕ್ಷರು ರಮೇಶ್ ಗಾವಡೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಿರೀಶ್ ಗೋಸಾವಿ ಮಂಡಳ ಉಪಾಧ್ಯಕ್ಷ ಗುರಪ್ಪ ಹಣಬರ ಪಕ್ಷದ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು