ಶಿರಸಿ: ಹಾಲು, ಮೊಸರು, ವಿದ್ಯುತ್ ದರ ಏರಿಕೆಯ ಬೆನ್ನಲ್ಲೇ ಈಗ ಬಸ್ ಟಿಕೆಟ್ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಹೊಟ್ಟೆಯ ಮೇಲೆ ಹೊಡೆದಿದೆ. ಬೆಂಗಳೂರಿನಲ್ಲಿ ಕನಿಷ್ಠ ದರ 6 ರಿಂದ 10 ರೂ.ಗೆ ಹಾಗೂ ಕೆಎಸ್ಆರ್ಟಿಸಿಯಲ್ಲಿ 4 ರಿಂದ 20 ರೂ.ವರೆಗೆ ಏರಿಸಿ ಜನರ ಮೇಲೆ ಅಸಹನೀಯ ಹೊರೆ ಹೇರಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೂಪಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು- ಅಸಮರ್ಪಕ ಗ್ಯಾರಂಟಿ ಯೋಜನೆಗಳು, ಬರಗಾಲದ ನಿರ್ವಹಣಾ ವೈಫಲ್ಯ ಹಾಗೂ ಆರ್ಥಿಕ ದುರಾಡಳಿತದಿಂದಾಗಿ ರಾಜ್ಯದ ಖಜಾನೆ ಸಂಪೂರ್ಣ ಖಾಲಿಯಾಗಿದೆ. ‘ಈ ಆರ್ಥಿಕ ಅವ್ಯವಸ್ಥೆಯ ನಡುವೆ ಸರ್ಕಾರ ನಡೆಯುತ್ತಿರುವುದೇ ಒಂದು ಪವಾಡ!’ ಬೊಕ್ಕಸದ ಈ ದುಃಸ್ಥಿತಿಯನ್ನು ಮುಚ್ಚಿಹಾಕಲು, ಒಂದೆಡೆ ಉಚಿತ ಎನ್ನುತ್ತಲೇ ಮತ್ತೊಂದೆಡೆ ಬೆಲೆ ಏರಿಕೆಯ ಮೂಲಕ ಜನರ ಜೇಬು ದೋಚಲಾಗುತ್ತಿದೆ. ಸರ್ಕಾರದ ವೈಫಲ್ಯಗಳಿಗೆ ದಿನಗೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಬಡ ರೋಗಿಗಳು ಬೆಲೆ ತೆರಬೇಕೇ?
ಜನವಿರೋಧಿ ಬಸ್ ದರ ಏರಿಕೆಯನ್ನು ಹಿಂಪಡೆಯಬೇಕು. ತಪ್ಪಿದರೆ ಜನಾಕ್ರೋಶ ಎದುರಿಸಬೇಕಾಗುತ್ತದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಸರ್ಕಾರವನ್ನು ಎಚ್ಚರಿಸಿದ್ದಾರೆ.
