ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಕ್ಯಾಸಲ್ ರಾಕ್ ದಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಅರಣ್ಯ ಇಲಾಖೆಯ ವತಿಯಿಂದ ವನ್ಯ ಜೀವಿ ಸಪ್ತಾಹ ಕ್ಕೆ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ನಿಲೇಶ ಶಿಂಧೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಕ್ಯಾಸಲ್ ರಾಕ್ ಭಾಗದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು,ನಾಗರೀಕರು ಜಾಥಾ ನಡೆಸುವ ಮೂಲಕ ವನ್ಯಜೀವಿ ಸಂರಕ್ಷಣೆಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಕ್ಯಾಸಲ್ ರಾಕ್ ಗ್ರಾಮ ಪಂಚಾಯತ ಅಧ್ಯಕ್ಷ ಸಂತೋಷ ರೇಡಕರ,ಎ.ಸಿ.ಎಫ್ ಗಳಾದ ಎಮ್.ಎಸ್.ಮಠ.ಗಿರೀಶ ಸಂಕ್ರಿ,ವಲಯ ಅರಣ್ಯಅಧಿಕಾರಿ ಗಳಾದ ರವಿಕಿರಣ ಸಂಪಗಾವಿ,ನೀಲಕಂಠ ದೇಸಾಯಿ,ಗಿರೀಶ ಚೌಗಲೆ, ಕ್ಯಾಸಲ್ ರಾಕ್ ವಲಯ ಅರಣ್ಯಾಧಿಕಾರಿ ಸಂತೋಷ,ಸಾರ್ವಜನಿಕರು ಉಪಸ್ಥಿತರಿದ್ದರು.