Banner Ad

ಸುದ್ಧಿಕನ್ನಡ ವಾರ್ತೆ

ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದ ಎರಡನೇ ಆವೃತ್ತಿಯಲ್ಲಿ ಋತು ಸ್ಪರ್ಶ , ಟೆಕ್ವಾಂಡೋ ಗರ್ಲ್ ಚಿತ್ರದ ನಟನೆಗಾಗಿ ಅತ್ಯುತ್ತಮ ಬಾಲ ಕಲಾವಿದೆ ಪ್ರಶಸ್ತಿ ಪಡೆದಿದ್ದಾರೆ.

Banner Ad

ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್ ವತಿಯಿಂದ ಆಯೋಜನೆ ಮಾಡಲಾದ ಕಾರ್ಯಕ್ರಮದಲ್ಲಿ ಋತು ಸ್ಪರ್ಶ ಅವರಿಗೆ ಪ್ರಶಸ್ತಿ ಘೋಷಿಸಲಾಯಿತು.

ಋತು ಸ್ಪರ್ಶ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯವರು. ಪ್ರವೀಣ್ ಭಾನು ಮತ್ತು ಡಾ. ಸುನಿತಾ ಪ್ರವೀಣ್ ಅವರ ಏಕೈಕ ಪುತ್ರಿಯಾಗಿದ್ದಾರೆ. 12 ವರ್ಷದ ಇವರು ರಾಜಾಜಿನಗರದ ಶ್ರೀ ಸಾಯಿ ವಿದ್ಯಾಲಯದಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದಾರೆ.

ದಕ್ಷಿಣ ಕೊರಿಯಾದ ಸಮರ ಕಲೆಯಾದ
ಟೆಕ್ವಾಂಡೋ ಅಭ್ಯಾಸ ಮಾಡಿರುವ ಇವರು ಈಜು, ಗಾಯಕಿ ಹಾಗೂ ನಟನೆಯಲ್ಲೂ ಮುಂದಿದ್ದಾರೆ. ಮೂರನೇ ವಯಸ್ಸಿನಲ್ಲಿ ಟೆಕ್ವಾಂಡೋ ಅಭ್ಯಾಸ ಮಾಡಿದ ಇವರು ಹಲವು ಟೂರ್ನಮೆಂಟ್ ಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.

2024ರಲ್ಲಿ ಬಿಡುಗಡೆಯಾದ ಟೆಕ್ವಾಂಡೋ ಗರ್ಲ್ ಚಿತ್ರಕಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿಯೆಟ್ನಾಂ ಅಂತರಾಷ್ಟ್ರೀಯ ಚಲನಚಿತ್ರದಲ್ಲಿ ಅತ್ಯುತ್ತಮ ಬಾಲ ನಟಿ, ಕರ್ನಾಟಕ ರಾಜ್ಯದ ಚಂದನವನ ಫಿಲಂ ಕ್ರಿಟಿಕ್ ಪ್ರಶಸ್ತಿ, ಏಶಿಯನ್ ನೆಟ್ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಇತ್ತೀಚೆಗಷ್ಟೇ ಚಿತ್ರಸಂತೆ ಪ್ರಶಸ್ತಿ ಕೂಡ ಪಡೆದುಕೊಂಡಿದ್ದಾರೆ.
___

Banner Ad