ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕು ವಿಸ್ತಾರದಲ್ಲಿ ರಾಜ್ಯದ ಎರಡನೇ ತಾಲೂಕು ಅನ್ನುತ್ತಾರೆ, ಅಭಿವೃದ್ಧಿ ಯಲ್ಲಿ ತುಂಬಾ ಹಿಂದೆ, ಬುದ್ದಿವಂತರೇ ಹೆಚ್ಚು.ಇರುವ ತಾಲೂಕಿನಲ್ಲಿ, ಒಂದೇ ಒಂದು ನ್ಯಾಯಾಲಯ ಇಲ್ಲ,ರಾಜ್ಯದ ವಿಸ್ತಾರದ ತಾಲೂಕಾದರೂ ಸಾರಿಗೆ ಘಟಕ ವಿಲ್ಲ, ಇಂತಹ ಸ್ಥಿತಿಯ ರಾಜ್ಯದ ಮೊದಲನೇ ತಾಲೂಕು ಈ ಜೋಯಿಡಾ.
ಹಿಂದೆ ಕಾರವಾರ ವಿಧಾನ ಸಭಾ ಕ್ಷೆತ್ರದ ವ್ಯಾಪ್ತಿಗೆ ಇದ್ದ ಜೋಯಿಡಾ ಸದ್ಯ ಹಳಿಯಾಳ ವಿಧಾನ ಸಭಾ ಕ್ಷೆತ್ರಕ್ಕೆ ಸೇರಿದೆ.ಈ ಹಿಂದುಳಿದ ತಾಲೂಕಿಗೆ ಸದ್ಯ ಒಂಬತ್ತು ಬಾರಿ ವಿಧಾನ ಸಭೆಗೆ ಗೆದ್ದು ಬಂದಿರುವ ಹೆಮ್ಮೆಯ ಆರ್ ವಿ ದೇಶಪಾಂಡೆ ಅವರೇ ಶಾಸಕರು. ಆದರೆ ಅವರಲ್ಲಿ ನಮ್ಮ ಸಮಸ್ಯೆ ಹೇಳುವ ಧೈರ್ಯ ವೇ ಅವರ ಯಾವ ಹಿಂಬಾಲಕರಿಗೂ ಇಲ್ಲ, ವಿರೋಧ ಪಕ್ಷ ದವರಿಗೂ ಇಲ್ಲ ಇದು ದೊಡ್ಡ ಜೋಯಿಡಾ ದ ದುರಂತ,ಆರ್ ವಿ ದೇಶಪಾಂಡೆ ಮನಸ್ಸು ಮಾಡಿದರೆ ಕೆಲವೇ ತಿಂಗಳಲ್ಲಿ ಇಲ್ಲಿ ನ್ಯಾಯಾಲಯ, ಬಸ್ ಘಟಕಗಳು, ಆರಂಭ ವಾಗಬಹುದು. ಆದರೆ……………………..
ಇಂತ ಸಮಯದಲ್ಲಿ ತಾಲೂಕಿನ ಗ್ರಾಮ ಪಂಚಾಯತ್ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಗಳಿಗೆ ಚುನಾವಣೆ ನಡೆಯುವ ಮುನ್ಸೂಚನೆ ಸಿಕ್ಕಿದೆ.ಸದ್ಯ ಆಯಾ ಕ್ಷೆತ್ರಗಳ ಬಗ್ಗೆ ಜನತೆ ಯಲ್ಲಿ ವಿವಿಧ ರೀತಿಯ ಚರ್ಚೆ ಗಳು ಕೇಳಿ ಬರುತ್ತಿವೆ, ಅಧಿಕಾರಕ್ಕಾಗಿ, ಕೆಲಸಕ್ಕಾಗಿ, ಸ್ಪರ್ದಿಸುವವರು ಹೆಚ್ಚಾಗಿ ಕಂಡು ಬರುತ್ತಿದ್ದಾರೆ. ಜಿಲ್ಲಾ ಪಂಚಾಯತ್ ಚುನಾವಣೆ ಹೆಚ್ಚಿನ ಆಕರ್ಷಣೆ ಆಗಿದೆ ತಾಲೂಕಿನಲ್ಲಿ ಎರಡು ಜಿಲ್ಲಾ ಪಂಚಾಯತ್ ಕ್ಷೆತ್ರ ಈಗ ಮೂರಾಗಿದೆ. ಜೋಯಿಡಾ, ಜಗಲ್ಬೇಟ್ ಮತ್ತು ರಾಮನಗರ. ಜಗಲ್ಬೇಟ್ ಹೊಸ ಕ್ಷೆತ್ರ,, ಇಲ್ಲಿ ಮತ್ತು ರಾಮನಗರ ಕ್ಷೆತ್ರ ಮಹಿಳೆಯರ ಪಾಲಾಗಿದೆ.
ಜೋಯಿಡಾ ಮಾತ್ರ ಪುರುಷರ ಪಾಲಾಗಿದೆ. ಇಲ್ಲಿ ಪೈಪೋಟಿ ಬಹಳ ಇದ್ದರೂ, ಸದ್ಯದ ಮೀಸಲಾತಿಯಲ್ಲಿ ಹೆಚ್ಚಾಗಿ ಕೇಳಿ ಬರುವ ಹೆಸರೇ ಸುಭಾಷ್ ಗಾವಡಾ ಅವರದು. ಅವರು ಸದ್ಯ ತಾಲೂಕಿನ ಯಾವುದೇ ಸಮಸ್ಯೆ ಗಳಿಗೆ ಕೂಡಲೇ ಜನರನ್ನು ಕಂಡು ಸ್ಪಂದಿಸುತ್ತಾರೆ, ಹಲವಾರು ಹೋರಾಟ ಗಳ ಮೂಲಕ ಅವರು ಜನತೆಗೆ ನ್ಯಾಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ಜನ ಹೇಳುತ್ತಾರೆ. ಜೋಯಿಡಾ ದಲ್ಲಿ ಯಾವುದೇ ಪಕ್ಷದ ಮೂಲಕ ಅಥವಾ ಸ್ವತಂತ್ರ ವಾಗಿ ಸ್ಪರ್ದಿಸಿದರೂ ಗೆಲ್ಲುವ ಜನಬಲ ಅವರಿಗೆ ಇದೆ, ಸದ್ಯ ಕಾಂಗ್ರೇಸ್ ನಲ್ಲಿ ಗುರುತಿಸಿ ಕೊಂಡರೂ, ರಾಜಕೀಯ ದಲ್ಲಿ ಯಾರು ಎಲ್ಲೇ ಇದ್ದರೂ ಎಲ್ಲೂ ಹೋಗಬಾರದು ಎಂದಿಲ್ಲ. ಅಲ್ಲದೇ ತಾಲೂಕಿನ ಸಮಸ್ಯೆ ಗಳನ್ನು ಶಾಸಕರಲ್ಲಿ ಚರ್ಚಿಸುವ ಧೈರ್ಯ ಸುಭಾಷ್ ಗಾವಡಾ ಅವರಲ್ಲಿದೆ. ಜಿಲ್ಲಾ ಪಂಚಾಯತ್ ಕ್ಕೆ ಅವರ ಆಯ್ಕೆ ಆದರೆ ಕುಣುಭಿ ಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಾಗಲಿ, ಅರಣ್ಯ ಅತಿಕ್ರಮಣ ಸಮಸ್ಯೆ ಗಳಿಗೆ, ಪರಿಹಾರ ಕಂಡು ಕೊಳ್ಳಲು, ಜನತೆಗೆ ಹೆಚ್ಚಿನ ಶಕ್ತಿ ಬರಲಿದೆ ಎಂಬ ಅಭಿಪ್ರಾಯ ಜನತೆಯಲ್ಲಿ ಕಂಡು ಬರುತ್ತಿದೆ. ಈ ಹಿಂದೆ ಆಯ್ಕೆ ಆದವರು ಜನರ ಹತ್ತಿರ ಹೋಗದೇ, ತಮ್ಮ ತಮ್ಮ ವ್ಯವಹಾರ ಮತ್ತು ಗುತ್ತಿಗೆ ದಾರರ ಕೈಗೊಂಬೆ ಯಂತೆ ನಡೆದು ಕೊಂಡಿರುವುದು, ಜನರಿಗೆ ಯಾರು ನಮಗೆ ಹಿತವರು ಎಂದು ಯೋಚಿಸುವಂತೆ ಮಾಡಿದೆ.
ಜೋಯಿಡಾ ಜನತೆ ತಾಲೂಕಿನ ಹಲವಾರು ಸಮಸ್ಯೆ ಗಳ ಬಗ್ಗೆ ಚಿಂತಿತರಾಗಿದ್ದಾರೆ, ತಾಲೂಕಿಗೆ ಇರಬೇಕಾದ ಮೂಲ ಸೌಕರ್ಯ ಗಳು ಇಲ್ಲ ದಿದ್ದರೆ ಮುಂದೊಂದು ದಿನ ತಾಲೂಕನ್ನೇ ಅರಣ್ಯ ಇಲಾಖೆ ಮತ್ತು ರಾಜಕಾರಣಿಗಳು, ಮುಗಿಸಿ ಬಿಡಬಹುದು, ಎಂಬ ಶಂಕೆ ಜನರನ್ನು ಕಾಡುತ್ತಿದೆ, ಹಾಗಾಗಿ, ಎಲ್ಲ ಪಕ್ಸ ಗಳಲ್ಲೂ ನಮ್ಮ ಕಾಳಜಿ ಮಾಡುವವರು ಯಾರಿದ್ದಾರೆ ಎಂದು ಹುಡುಕುತ್ತಿದ್ದಾರೆ. ಮೊದಲು ತಾಲೂಕಿನ ಅಭಿವೃದ್ಧಿಯ ಬಗ್ಗೆ ಚಿಂತಿಸುವವರು ಬೇಕೇ ಹೊರತು, ತಾಲೂಕನ್ನು ಬಳಸಿಕೊಂಡು ತಮ್ಮ ಅಭಿವೃದ್ಧಿ ಮಾಡಿ ಕೊಳ್ಳುತ್ತ, ಜನತೆಯನ್ನು ಇಷ್ಟುದಿನ ಬಳಸಿ ಕೊಂಡಂತೆ ಬಳಸಿ ಕೊಳ್ಳುವವರು ಬೇಡ ಎನ್ನುತ್ತಿದ್ದಾರೆ. ಚುನಾವಣೆ ಎನ್ನುವುದು ಏನೇ ಅನಿಸಿದರೂ ಕೊನೆಯ ಎರಡು ದಿನದಲ್ಲಿ ಅಂತಿಮ ಹಂತಕ್ಕೆ ಬರುತ್ತದೆ, ಹಾಗಾಗಿ ನಮಗೆ ಯಾರು ಹಿತವರು ಎಂದು ತಿಳುದು ಕೊಳ್ಳುವ ಕಾಲ ಬಂದಿದೆ.
