ಸುದ್ಧಿಕನ್ನಡ ವಾರ್ತೆ
Goa :ಗೋವಾದ ಪೊಂಡಾದ ದುರ್ಗಿಣಿ ಧಾರಾಬಾಂದೋಡದಲ್ಲಿ ಮರ್ಜಡೀಸ್ ಕಾರು ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರು (Baangalore) ಮೂಲದ ದಂಪತಿಗಳು ಸಾವನ್ನಪ್ಪಿದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.

ಗೋವಾದ ವಾಸ್ಕೊದಲ್ಲಿ ವಾಸಿಸುವ ಸುಮನ್ ಪಾಲ್ (53, ಬೆಂಗಳೂರು), ಪತ್ನಿ ಸಿಂಧು ಮೂರ್ತಿ(48,ಬೆಂಗಳೂರು) ಇವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸೀಮಾ ರಮೇಶ್ (53, ವಾಸ್ಕೊ ನಿವಾಸಿ, ಮೂಲತಃ ಬೆಂಗಳೂರು) ಇವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗೋವಾ ವೈದ್ಯಕೀಯ ಆಸ್ಪತ್ರೆ ಬಾಂಬೋಲಿಗೆ ದಾಖಲಿಸಲಾಗಿದೆ.

ಈ ಅಪಘಾತಕ್ಕೆ ಸಂಬಧಿಸಿದಂತೆ ಗೋವಾದ ಕುಳೆ ಪೋಲಿಸರು ಟ್ರಕ್ ಚಾಲಕ ನಾಗರಾಜ್ ಭಜಂತ್ರಿ ನನ್ನು ಬಂಧಿಸಿದ್ದಾರೆ.

Banner Ad

ಘಟನೆಗೆ ಸಂಬಂಧಿಸಿದಂತೆ ಕುಳೆ ಪೋಲಿಸರಿಂದ ಲಭ್ಯವಾದ ಮಾಹಿತಿಯ ಅನುಸಾರ- ಕೆಎ-03-ಎನ್ ಟಿ- 3021 ನೋಂದಣಿಯ ಮರ್ಚಡೀಸ್ ಕಾರು ಬೆಂಗಳೂರಿನ ವಾಸ್ಕೊಕ್ಕೆ ಬರುತ್ತಿತ್ತು. ಗೋವಾದ ದುರ್ಗಿಣಿ ಧಾರಾಬಾಂದೋಡದಲ್ಲಿ ವೇಗವಾಗಿ ಬಂದ ಮರ್ಚಡೀಸ್ ಕಾರು ಟ್ರಕ್ ಗೆ (ಕೆಎ-26, ಎ-4742) ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರು ಚಾಲಕ ಸುಮನ್ ಪಾಲ್ ಹಾಗೂ ಪತ್ನಿ ಸಿಂಧು ಮೂರ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸೀಮಾ ರಮೇಶ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೀಮಾ ರಮೇಶ್ ರವರು ಬೆಂಗಳೂರಿಗೆ ಹೋಗಿದ್ದರು. ಪಾಲ್ ದಂಪತಿಗಳನ್ನು ವಾಸ್ಕೊದಲ್ಲಿರುವ ತಮ್ಮ ಮನೆಗೆ ಕರೆದುಕೊಂಡು ಹೋಗಿ ಶನಿವಾರ ಮತ್ತು ಭಾನುವಾರ ಗೋವಾದಲ್ಲಿ ತಂಗಲು ಯೋಜಿಸಿದ್ದರು.

ಗೋವಾದ ಕುಳೆ ಪೋಲಿಸ್ ಇನ್ಸಪೆಕ್ಟರ್ ಮೆಲ್ವಿಟೊ ಫರ್ನಾಂಡೀಸ್ ರವರ ಮಾರ್ಗದರ್ಶದಲ್ಲಿ ಸಬ್ ಇನ್ಸಪೆಕ್ಟರ್ ಸಂದೀಪ ನಿಂಬಾಳಕರ್ ಮತ್ತು ಸನಿತ್ ಕವಳೇರ್ ಪಂಚನಾಮೆ ನಡೆಸಿದ್ದಾರೆ.