ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ: ರಸ್ತೆ ತಡೆ ಸಂಚಾಲನಾ ಸಮಿತಿಯಿಂದ ಇವತ್ತು ಕಿರವತ್ತಿ,ಮಾದೇಕೊಪ್ಪ ಮತ್ತು ಚಂಧಗುಳಿ ಪಂಚಾಯತ ವ್ಯಾಪ್ತಿಯ ಉಪಳೇಶ್ವರದಲ್ಲಿ ಜನಸಂಪರ್ಕ ಅಭಿಯಾನ ನಡೆಸಲಾಯಿತು.

Banner Ad

ಅಧ್ಯಕ್ಷರಾದ ಎನ್.ಕೆ ಭಟ್,ಪ್ರ.ಸಂಚಾಲಕ ಹರಿಪ್ರಕಾಶ ಕೋಣೆಮನೆ, ಮಾಜಿ ಎಂಎಲ್ಸಿ ಶಾಂತಾರಾಮ ಸಿದ್ದಿ,ಸಂಚಾಲಕರಾದ ರಾಘವೇಂದ್ರ ಭಟ್ಟ ಹಾಸಣಗಿ,ವೆಂಕಟ್ರಮಣ ಕಿರಕುಂಭತ್ತಿ, ಸುಬ್ಬಣ್ಣ ಉದ್ದಾಬೈಲ್ ಕೊಳ್ಳ ಸಮಿತಿಯ ಸಂಚಾಲಕ ನರಸಿಂಹ ಸಾತೊಡ್ಡಿ ಇದ್ದು‌ಮಾಹಿತಿ ನೀಡಿದರು.


ಮನೆ ಮನೆ ಸಂಪರ್ಕದ ಬಗ್ಗೆ ತಿಳಿಸಲಾಯಿತು.ಕಿವತ್ತಿ‌ಮದನೂರು ಭಾಗದಿಂದ ಗೌಳಿಸಮುದಾಯ ದೊಡ್ಡಸಂಖ್ಯೆಯಲ್ಲಿ ಬರುವ ಬಗ್ಗೆ ಸಮುದಾಯದ ಮುಖಂಡ ದೋಂಡು‌ಪಾಟೀಲ್ ತಿಳಿಸಿದರು.ಮಾದೇಕೊಪ್ಪದಲ್ಲಿ ಗೌಳಿ ಸಮುದಾಯದ ಪ್ರಮುಖರು,ವಿಠ್ಠಲ ರುಕ್ಮಾಯಿ ದೇವಾಲಯದ ಪ್ರಮುಖರು ಗೌಳಿಸಮುದಾಯದ ಮುಖಂಡರು ಜನಸಂಪರ್ಕ ಸಭೆಯಲ್ಲಿದ್ದರು.ಕಿರವತ್ತಿಯ ಒಂಬತ್ತು ಗ್ರಾಮಗಳ ಪ್ರಮುಖರ ಸಭೆ ಕರೆದು ಪ್ರತಿ ಮನೆ ಮನೆ ತಲುಪುವ ಹಾಗೇ ನ.೩ ರ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುವ ಬಗ್ಗೆ ತಿಳಿಸಿದರು.

ಪಾಂಡ್ರಮೀಸೆ,ಸುನೀಲ್, ಬೀರು ಶಿಂಧೆ,ಬಜ್ಜು ಪಿಂಗಳೆ ಹಲವರು ಪಾಲ್ಗೊಂಡಿದ್ದರು.ಸಮಿತಿಯ ಪ್ರಮುಖರು ರಸ್ತಾ ರೋಖೋ ಬಗ್ಗೆ ಮಾಹಿತಿ ನೀಡಿದರುಈ ಭಾಗದಿಂದ ಎರಡರಿಂದ ಎರಡುವರೆ ಸಾವಿರ ಜನ ರಸ್ತೆ ತಡೆಯಲ್ಲಿ ಪಾಲ್ಗೊಳ್ಳುವದಾಗಿ ಭೀರು ಶಿಂಧೆ,ದೋಂಡು‌ಪಾಟೀಲ್ ತಿಳಿಸಿದರು.ಉಪಳೇಶ್ವರದಲ್ಲಿ ನಡೆದ ಸಭೆಯಲ್ಲಿ ಮಾಜಿ ಎಂ.ಎಲ್ ಸಿ‌ಶಾಂತಾರಾಮ ಸಿದ್ದಿ ಮಾತನಾಡಿ,ಯೋಜನೆ ನಿಲ್ಲೊಸುವುದೇ ನಮ್ಮ ಉಧ್ದೇಶವಾಗಿದೆ.ಜನ ಕೈಜೋಡಿಸಬೇಕು.ಯೋಜನೆಯಿಂದಾಗುವ ಅಪಾಯ ಹಾನಿ ಬಗ್ಗೆ ತಿಳಿದುಕೊಳ್ಳಿ .ಯೋಜನೆ ಕಾರ್ಯಗತಗೊಳಿಸಿದರೂ ಮುಂದುವರೆಯದೇ ಹಳ್ಳಹಿಡಿಯುತ್ತದೆ.ಇದಕ್ಕೆ ನಿದರ್ಶನಗಳಿದೆ.ಜನ ಒಕ್ಕಟ್ಟಿನಿಂದ ಈ ಯೋಜನೆ ವಿರೋಧಿಸಬೇಕು ಎಂದರು.ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ ಸಂಚಾಲಕ ರಾಘವೇಂದ್ರ ಭಟ್ಟ ಹಾಸಣಗಿ ಹೋರಾಟದ ರೂಪುರೇಷೆ ತಿಳಿಸಿದರು.