ಸುದ್ದಿ ಕನ್ನಡ ವಾರ್ತೆ
ಜೊಯಿಡಾ:ಖ್ಯಾತ ಮನೋರೋಗ ತಜ್ಞ ಧಾರವಾಡದ
ಡಾ. ಆನಂದ ಕೆ . ಪಾಂಡುರಂಗಿ ಅವರು ಇತ್ತೀಚೆಗೆ ದೈವಾಧೀನರಾದರು. ಅವರ ಆತ್ಮಕ್ಕೆ ಶಾಂತಿ ಕೋರಿ ಇಂದು ಜೋಯಡಾದ ಅಸ್ನೋಟಿಕರ ಸಭಾ ಭವನದಲ್ಲಿ ಶ್ರದ್ಧಾಂಜಲಿ ಸಭೆ ಕರೆಯಲಾಗಿತ್ತು. ಈ ಸಭೆಯ ಆಯೋಜನೆ ಸಂಜೀವಿನಿ ಸೇವಾ ಟ್ರಸ್ಟ್ ಹಾಗು ಕಾಳಿ ಬ್ರಿಗೇಡ್ ಜಂಟಿಯಾಗಿ ಮಾಡಿದ್ದವು.
ಕಳೆದ ಮೂರು ದಶಕಗಳ ಕಾಲ ಡಾ.ಪಾಂಡುರಂಗಿ ಯವರು ಜೋಯಡಾದ ಮನೋರೋಗಿಗಳಿಗೆ ನೀಡಿದ ಪ್ರಾಮಾಣಿಕ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಜೋಯಡಾದ ಪಾಲಿಗೆ ಅವರು ದೇವರಾಗಿದ್ದರು. ಹಣವಿಲ್ಲದ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದರು. ಅವರಿಂದಾಗಿ ಸಾವಿರಾರು ಕುಟುಂಬ ಗಳು ದಾರಿ ಪಾಲು ಆಗುವುದನ್ನು ತಪ್ಪಿದೆ. ಎಂದು ಸಭಿಕರ ರಲ್ಲಿ ಅನೇಕರು ಗುಣಗಾನ ಮಾಡಿ ತಮ್ಮ ನೋವು ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಕಿಸಾನ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ, ರವಿ ರೇಡಕರ್ ರವರು ಡಾಕ್ಟರ್ ರೋಂದಿಗಿನ ತಮ್ಮ ಮುವತ್ತು ವರ್ಷಗಳ ಬಾಂಧವ್ಯವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ರಫಿಕ್ ಖಾಜಿ, ಸಂಜೀವನಿ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಡಾ. ಜಯಾನಂದ ಡೇರೆಕರ್, ಪ್ರಭಾಕರ್ ನಾಯ್ಕ್, ಕಿರಣ ನಾಯ್ಕ್, ನಾರಾಯಣ ಹೆಬ್ಬಾರ,
ಕಾಳಿ ಬ್ರಿಗೇಡ್ ಅಧ್ಯಕ್ಷ ಸತೀಶ ನಾಯ್ಕ್, ಕಾರ್ಯದರ್ಶಿ ಸಮಿರ ಮುಜಾವರ್, ವ್ಯಾಪಾರಸ್ಥರ ಸಂಘ ದ ಅಧ್ಯಕ್ಷ ಸುಧಾಕರ್ ದೇಸಾಯಿ, ಅಜಿತ್ ಮಿರಾಶಿ, ಜಿಎಸ್ಎಸ್ ಸೊಸೈಟಿ ಕಾರ್ಯದರ್ಶಿ ಸುಲಕ್ಷಾ ದೇಸಾಯಿ, ಡಾ. ಗಣೇಶ, ಸಂಜೀವನಿ ಸಿಬ್ಬಂದಿಗಳಾದ ಜಯಂತ್ ಗಾವಡಾ, ನಾಗವೇಣಿ, ಲಲಿತಾ ಹಿರಿಯಾದ ಗಜಾನನ ದೇಸಾಯಿ, ರವಿ ಡೇರೆಕರ್, ಡಾಮನಿಕ್ ಫರ್ನಾಂಡಿಸ್, ಉದಯ ದೇಸಾಯಿ ಉಪಸ್ಥಿತರಿದ್ದರು.
