ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ಗ್ರಾಮೀಣ ಜನತೆಯ ಬೇಡಿಕೆಗೆ ಅನುಗುಣವಾಗಿ ಉದ್ಯೋಗ ನೀಡುವ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯಕ್ರಮ ರೂಪಿಸಲು ಸರಕಾರ ನೀಡಿರುವ ಆದೇಶದಂತೆ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಭಾರತಿ ಎನ್ ಅವರು ತಾಲೂಕಿನ ಎಲ್ಲ ಹದಿನಾರು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಗಳಿಗೆ ಸರಕಾರದ ಸುತ್ತೋಲೆ ಕಳುಹಿಸಿ ಅಭಿವೃದ್ಧಿಗೆ ವೇಗ ನೀಡಲು ಕೇಳಿಕೊಂಡಿದ್ದಾರೆ.

ರಾಜ್ಯದಲ್ಲಿ ಎಲ್ ನಿನೋ ಪ್ರಭಾವ ದಿಂದ ಮಳೆ ಕೊರತೆ ಆಗಿದೆ.ಹಲವು ಗ್ರಾಮ ಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಆಗಿದೆ, ಹಾಗಾಗಿ ರಾಜ್ಯದ ವಿವಿಧ ಜಿಲ್ಲೆಯ, ತಾಲೂಕುಗಳಲ್ಲಿ ಬರದ ಛಾಯೆ ತಾಂಡವ ಆಡುತ್ತಿದೆ. ಇದರಿಂದ ಗ್ರಾಮೀಣ ಜನರು ಕೆಲಸಕ್ಕಾಗಿ ಬೇರೆ ಜಿಲ್ಲೆ ರಾಜ್ಯ ಗಳಿಗೆ ಗುಳೆ ಹೋಗುತ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ತಕ್ಷಣ ದಿಂದಲೇ ಜಾರಿಗೆ ಬರುವಂತೆ ಗ್ರಾಮೀಣ ಜನರಿಗೆ ಅವರವರ ಗ್ರಾಮದಲ್ಲಿಯೇ, ವಿ ಬಿ ಜಿ ರಾಮ್ ಜಿ ಯೋಜನೆಯ ಅಡಿಯಲ್ಲಿ ಉದ್ಯೋಗ ಕಲ್ಪಿಸಲು ಬೇಡಿಕೆಗೆ ಅನುಗುಣ ವಾಗಿ ಬರ ಪರಿಹಾರ ಕಾಮಗಾರಿ ಗಳನ್ನು ಕೈಗೆತ್ತಿಕೊಂಡು ಜನತೆಗೆ ಕೆಲಸ ನೀಡಿ ಗುಳೆ ಹೋಗುವುದನ್ನು ತಪ್ಪಿಸಬೇಕು. ಇದರೊಂದಿಗೆ ಬರ ಪರಿಹಾರ ಕಾಮಗಾರಿ ಆರಂಭಿಸಬೇಕು.

Banner Ad

ಗ್ರಾಮ ಮಟ್ಟದಲ್ಲಿಯೇ ಉದ್ಯೋಗ ನೀಡಬೇಕು ವಿವಿಧ ಯೋಜನೆಗಳ ಮಾಹಿತಿ ನೀಡಬೇಕು, ಕೂಲಿಗೆ ಅನುಗುಣವಾಗಿ ಕಾಮಗಾರಿ ರೂಪಿಸಬೇಕು. ಸಕಾಲದಲ್ಲಿ ಕೂಲಿ ಹಣ ವಿತರಣೆ ಮಾಡಬೇಕು. ಆದ್ಯತೆಯ ಮೇರೆಗೆ ಕಾಮಗಾರಿ, ಮತ್ತು ವಿವಿಧ ಇಲಾಖೆ ಯೊಂದಿಗೆ ಸಮನ್ವಯ ಸಾಧನೆ ಮಾಡಿಕೊಂಡು ಕಾಮಗಾರಿ ಮಾಡಲು, ಆ ಮೂಲಕ ಜನತೆಗೆ ಬರಗಾಲದ ಕಾಮಗಾರಿ ನೀಡಿ ಗುಳೆ ಹೋಗುವುದನ್ನು ತಪ್ಪಿಸಲು, ಜನತೆಗೆ ಅವರವರ ಗ್ರಾಮ ದಲ್ಲಿಯೇ ಉದ್ಯೋಗ ನೀಡುವ ಮೂಲಕ ಸರಕಾರದ ಯೋಜನೆಯನ್ನು ಅನುಷ್ಠಾನಕ್ಕೆ ತರುವಂತೆ ಸರಕಾರದ ಸುತ್ತೋಲೆ ನೀಡಿದ್ದಾರೆ.ಇದರಿಂದಾಗಿ ತಾಲೂಕಿನ ಜನತೆಯಲ್ಲಿ ಆಶಾ ಭಾವನೆ ಮೂಡಿದೆ, ಗ್ರಾಮದಲ್ಲಿಯೇ ಕೆಲಸ ಸಿಗುವ ಭರವಸೆ ಸಿಕ್ಕಿದೆ.