ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಗಜಾನನ ಮಾರುತಿ ಪಾಟೀಲ್ ಬಿರಂಪಾಲಿ ಅವರನ್ನು ತಕ್ಷಣವೇ ಪಂಚಾಯಿತಿಯಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಬಾಮಣಗಿ ಗ್ರಾಮಸ್ಥರು ಎರಡು ಸಲ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭಾರಥಿ ಎನ್ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.

ಗ್ರಾಮಸ್ಥರು ನೀಡಿರುವ ದೂರಿನ ಪ್ರಕಾರ ಕಂಪ್ಯೂಟರ್ ಆಪರೇಟರ್ ತಮ್ಮ ಕರ್ತವ್ಯಕ್ಕೆ ಸರಿಯಾದ ಸಮಯಕ್ಕೆ ಬರುತ್ತಿಲ್ಲ ಮತ್ತು ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಪಂಚಾಯತ್ ಕಾರ್ಯಾಲಯಕ್ಕೆ ಭೇಟಿ ನೀಡಿದಾಗ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಮರ್ಪಕವಾಗಿ ಕಾರ್ಯನಿರ್ವಹಿಸದ ಇವರು, ಸಾರ್ವಜನಿಕ ಕೆಲಸಗಳಿಗಾಗಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಹಾಗೂ ಕಾರ್ಯಾಲಯದಲ್ಲಿ ಜನರೊಂದಿಗೆ ಅನಗತ್ಯವಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

Banner Ad

ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರು ಇವರಿಂದ ತೊಂದರೆ ಅನುಭವಿಸುತ್ತಿದ್ದು, ಮೇಲಧಿಕಾರಿಗಳಿಗೂ ಇವರು ಗೌರವ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಹಿರಿಯ ಅಧಿಕಾರಿಗಳು ಈ ಕಡೆ ಗಮನ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಗ್ರಾಮಸ್ಥರು, ಜನರ ಸಮಸ್ಯೆಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಮತ್ತು ಸ್ಥಳೀಯ ಶಾಸಕರು ಕೂಡಲೇ ಈ ಬಗ್ಗೆ ವಿಶೇಷ ಲಕ್ಷ್ಯ ವಹಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇಂತಹ ಬೇಜವಾಬ್ದಾರಿ ವ್ಯಕ್ತಿಯನ್ನು ನಮ್ಮ ಪಂಚಾಯಿತಿಯಿಂದ ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ, ಬಾಮಣಗಿ ಗ್ರಾಮದ ಸೀತಾರಾಮ್ ಮಿರಾಶಿ, , ದಶರಥ ಮಿರಾಶಿ,ರಾಜೇಂದ್ರ ನಾಯ್ಕ, ರಾಜು ಗಾವಡಾ,ಸೇರಿದಂತೆ ಹಲವು ಗ್ರಾಮಸ್ಥರು ಸಹಿ ಮಾಡಿದ ಮನವಿ ಪತ್ರವನ್ನು ಜೋಯಿಡಾ ತಾಲೂಕು ಪಂಚಾಯತ್‌ಗೆ ನೀಡಿದ್ದಾರೆ ತಾಲೂಕು ಪಂಚಾಯತ್ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ಗಾಗಿ ಕಾಯುತ್ತಿದ್ದಾರೆ.

ತಾ ಪಂ ಕಾ ನಿ ಅಧಿಕಾರಿ ಎನ್ ಭಾರಥಿ,,,ಪ್ರಧಾನಿ ಗ್ರಾಮ ಪಂಚಾಯತ ಕಂಪ್ಯೂಟರ್ ಆಪರೇಟರ್ ಬಗ್ಗೆ ಪರಿಶೀಲನೆ ನಡೆದಿದ್ದು, ಅವರ ಮೇಲೆ ಕ್ರಮ ವನ್ನು ಜಿಲ್ಲಾ ಪಂಚಾಯತ್ ಕೈ ಕೊಳ್ಳ ಬೇಕಾಗಿದೆ. ಈಗಾಗಲೇ ನಮಗೆ ದೊರೆತಿರುವ ಮಾಹಿತಿಯನ್ನು ನಾವು ಜಿಲ್ಲಾ ಪಂಚಾಯತ್ ಕ್ಕೆ ಕಳಿಸಿದ್ದು, ಅಲ್ಲಿಂದಲೇ ನೇಮಕ ವಾದ ಅವರ ಮೇಲೆ ಜಿಲ್ಲಾ ಪಂಚಾಯತ್ ಸೂಕ್ತ ಕ್ರಮ ಕೈಕೊಳ್ಳುತ್ತದೆ ಎಂದು ತಿಳಿಸಿರುತ್ತಾರೆ. ಬೇಗನೇ ಕ್ರಮ ಆಗುವ ಭರವಸೆ ನೀಡಿದ್ದಾರೆ.