ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ (ರಿ) ಉತ್ತರ ಕನ್ನಡ ಜಿಲ್ಲಾ ಘಟಕ ಇವರ ಆಶ್ರಯದಲ್ಲಿ ಯಲ್ಲಾಪುರದ ಶ್ರೀ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಅಕ್ಟೋಬರ್ 6 ರಂದು ಮಧ್ಯಾಹ್ನ 3:00ಯಿಂದ ಶ್ರೀ ವೇದ ಪಾರಾಯಣ ಮತ್ತು ಸಾಮೂಹಿಕ ಶ್ರೀ ರಾಮ ತಾರಕ ಜಪ ಅನುಷ್ಠಾನ ನೆರವೇರಿಸಲಾಯಿತು.
ಬರಗಾಲ ಪರಿಹಾರ, ಉತ್ತಮ ಮಳೆಗಾಗಿ, ಅಡಿಕೆಗೆ ಅಂಟಿರುವ ಎಲೆಚುಕ್ಕಿ ರೋಗ ನಿವಾರಣೆಗಾಗಿ, ನದಿ ಜೋಡಣೆ ಅಂತಹ ಪರಿಸರ ನಾಶದ ಯೋಜನೆ ನಿಲ್ಲಿಸುವ ಸಲುವಾಗಿ, ಲೋಕಕಲ್ಯಾಣ ಅರ್ಥವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬ್ರಾಹ್ಮಣರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಈ ಅನುಷ್ಠಾನ ನೆರವೇರಿಸಿದರು.
