ಸುದ್ದಿ ಕನ್ನಡ ವಾರ್ತೆ
ಸಿದ್ದಾಪುರ:ಸಿದ್ದಾಪುರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು, ಬೆಳೆ ಹಾನಿಯಾದ ರೈತರಿಗೆ ಎಕರೆಗೆ 25 ಸಾವಿರ ರೂ ನಂತೆ ಪರಿಹಾರ ನೀಡಬೇಕು ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅನಂತ್ ಮೂರ್ತಿ ಹೆಗಡೆ ಒತ್ತಾಯ ಮಾಡಿದರು.
ಸಿದ್ದಾಪುರ ತಾಲೂಕಿನ ಶಿರಳಗಿಯಲ್ಲಿ ಮಳೆಯಿಂದ ಬೆಳೆ ಹಾನಿಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರ ಸಮಸ್ಯೆಗಳು ಆಲಿಸಿ ಒತ್ತಾಯ ಮಾಡಿದರು.
ಇನ್ನು 15 ದಿನಗಳ ಗಡುವನ್ನು ನೀಡಲಾಗುವುದು. ಅಷ್ಟರೊಳಗೆ ನೀವು ಈ ಮಲತಾಯಿ ಧೋರಣೆಯನ್ನು ಬಿಟ್ಟು ಸಿದ್ದಾಪುರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿ ಎಕರೆಗೆ 25,000 ಪರಿಹಾರ ನೀಡಿ ಆದೇಶ ಮಾಡಬೇಕು ಇಲ್ಲದೆ ಹೋದಲ್ಲಿ ಮುಂಬರುವ ದಿನದಲ್ಲಿ ಉಗ್ರ ಹೋರಾಟ ಮಾಡಲಾಗುವುದು. ನಮ್ಮ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎಂದೆಂದಿಗೂ ರೈತರ ಪರವಾಗಿದೆ. ರೈತರಿಗೆ ಕಷ್ಟ ಆದಾಗ ನರೇಂದ್ರ ಮೋದಿ ನೇತೃತ್ವದ ನಮ್ಮ ಬಿಜೆಪಿ ಸರ್ಕಾರ ಎಂದೆಂದಿಗೂ ಅವರ ಜೊತೆ ನಿಲ್ಲಲಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಮಡಿವಾಳ
ಮಾತನಾಡಿ ಮಳೆ ಕೊರತೆಯ ಕಾರಣದಿಂದಾಗಿ ಈ ಗ್ರಾಮದಲ್ಲಿ ನೆಟ್ಟ ಗದ್ದೆ ನೆಟ್ಟ ಹಾಗೆ ಇದೆ ಯಾವುದೇ ಕಾರಣಕ್ಕೂ ಬೆಳೆ ಬರಲು ಸಾಧ್ಯವೇ ಇಲ್ಲ . ಈ ಭಾಗದಲ್ಲಿ ಶೇಕಡ 90ರಷ್ಟು ಗದ್ದೆಯನ್ನು ಅವಲಂಬಿಸಿದ್ದಾರೆ. ಸ್ವಲ್ಪ ಪ್ರಮಾಣದಲ್ಲಿ ಅಡಿಕೆ ಬೆಳೆಯುತ್ತಾರೆ ಅದು ಕೂಡ ಅಡಿಕೆ ಎಲೆ ಚುಕ್ಕಿ ರೋಗಕ್ಕೆ ಬಲಿಯಾಗುವ ಹಂತದಲ್ಲಿದೆ. ಭತ್ತ ಸಂಪೂರ್ಣವಾಗಿ ನಾಶವಾಗಿದೆ ಕೆಲವು ಕಡೆ ತೆನೆ ಹೊರಟಿದೆ. ತೆನೆ ನೀರಿಲ್ಲದೆ ಜೋಳ್ಳಾಗಿದೆ. ಕೆಲವರ ರೈತರು ಬೋರ್ವೆಲ್ ಮೂಲಕ ನೀರು ಹಾಯಿಸಿ ಬೆಳೆ ತೆಗೆಯುವ ಪ್ರಯತ್ನದಲ್ಲಿ ಇದ್ದಾರೆ. ಆದರೆ ವಿಪರೀತ ಬಿಸಿಲಿನಿಂದಾಗಿ ಬಿಟ್ಟ ನೀರು ಸ್ವಲ್ಪ ಸಮಯದಲ್ಲಿ ಆರಿ ಹೋಗುತ್ತದೆ.. ನಾವು ರಾಜ್ಯ ಸರ್ಕಾರವನ್ನು ಸಿದ್ದಾಪುರ ತಾಲೂಕನ್ನು ಬರಪೀಡಿತ ತಾಲೂಕು ಎಂದು ತಾಲೂಕಿನಲ್ಲಿ ಸಣ್ಣ ಸಣ್ಣ ರೈತರನ್ನು ಕೆಲಸ ಮಾಡಬೇಕು. ಒಂದು ಎಕರೆಗೆ 25 ಸಾವಿರ ರೂಪಾಯಿಯಂತೆ ಪರಿಹಾರವನ್ನು ಕೊಡುವ ಆದೇಶವನ್ನು ಶಾಸಕರಾದ ಭೀಮಣ್ಣ ನಾಯಕ್ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ. ಕಂದಾಯ ಮತ್ತು ಕೃಷಿ ಇಲಾಖೆಯವರು ಜಂಟಿ ಸರ್ವೆ ಮಾಡಿ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹ ಮಾಡಿದರು.
ರೈತ ಮೋರ್ಚಾ ಸಿದ್ದಾಪುರ ತಾಲೂಕಾಧ್ಯಕ್ಷ ನಾರಾಯಣ ಹೆಗಡೆ ಮಾತನಾಡಿ, ಸಿದ್ದಾಪುರ ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು. ಈಗಾಗಲೇ ರೈತರು ಕಂಗಾಲಾಗಿದ್ದಾರೆ.ಸ್ಥಳೀಯ ಶಾಸಕರು ಹೆಚ್ಚಿನ ಗಮನ ಹರಿಸಬೇಕು ಎಂದರು .
ಸಿದ್ದಾಪುರ ಯುವ ಮೊರ್ಚಾ ಅಧ್ಯಕ್ಷ ಅಣ್ಣಪ್ಪ ನಾಯ್ಕ ಮಾತನಾಡಿ,
ಸಿದ್ದಾಪುರ ತಾಲೂಕಿನ್ನು ಬರಪೀಡಿತ ತಾಲೂಕು ಎಂದು ಸರ್ಕಾರ ಘೋಷಣೆ ಮಾಡಬೇಕು. ಶಾಸಕರು ಹಾಗೂ ಸರ್ಕಾರ ಘೋಷಣೆ ಮಾಡದಿದ್ದರೆ ಸಿದ್ದಾಪುರದ ರೈತರು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಮಂಜುನಾಥ್ ಭಟ್, ಸುರೇಶ ಬಾಲಿಕೊಪ್ಪ, ಶ್ರೀಕಾಂತ್ ಭಟ್, ಎಸ್ ಕೆ ನಾಯ್ಕ ,ಮುನಾವರ್ ,ಸುರೇಂದ್ರ ಗೌಡ , ಸಿ.ಆರ್ ನಾಯ್ಕ ಹಾಗೂ ರೈತರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
3 ವರ್ಷಕ್ಕೆ ಕಾಂಗ್ರೆಸ್ ಸರಕಾರ ಸಾಕಾಗಿದೆ, ಯಾಕಾದ್ರೂ ಈ ಶಾಸಕರಿಗೆ ಮತ ಹಾಕಿದ್ದೇವೆಯೋ ಎನ್ನುವ ಭಾವನೆ ಬರುತ್ತಿದೆ,
ಭೀಮಣ್ಣ ನಾಯ್ಕ್ ರವರು ಈ ಕ್ಷೇತ್ರವನ್ನು ಸಿಂಗಾಪುರ ಮಾಡುತ್ತೇನೆ ಎನ್ನುವ ರೀತಿಯಲ್ಲಿ ಮಾತನಾಡಿದ್ದರು , ಸಿಂಗಪುರದಲ್ಲಿ ಹೋಟೆಲ್ ನಲ್ಲಿ ಸ್ವಿಮ್ಮಿಂಗ್ ಪೂಲ್ ಇದೆ, ಆದರೆ
ಇಲ್ಲಿನ ಹಳ್ಳಿಯ ಬಹುತೇಕ ರಸ್ತೆ ಯಲ್ಲಿ ಸ್ವಿಮ್ಮಿಂಗ್ ಪೂಲ್ ಮಾಡಿದ್ದಾರೆ , 3 ವರ್ಷದಿಂದ ರಸ್ತೆ ಗುಂಡಿ ಮುಚ್ಚಿಯೇ ಇಲ್ಲಾ
ಶಿವಕುಮಾರ ಶಿರಳಗಿ. ಶಿರಳಗಿ ಶಕ್ತಿ ಕೇಂದ್ರದ ಅಧ್ಯಕ್ಷ.
