ಸುದ್ದಿ ಕನ್ನಡ ವಾರ್ತೆ

ಜೊಯಿಡಾ ತಾಲೂಕಿಗೆ ಮಾರಕವಾದ ಕಸ್ತೂರಿ ರಂಗನ ವರದಿ ವಿರೋಧಿಸಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈಗಾಗಲೇ ಕರ್ನಾಟಕ ಸರಕಾರ ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಮಾಡಲು ನಾವು ಸಿದ್ಧರಿಲ್ಲ ಎಂದು ಹೇಳಿದೆ ಆದರೂ ಜನತೆಗೆ ತಾವು ಕೂಡ ಸರಕಾರದ ಧ್ವನಿಗೆ ಧ್ವನಿ ಸೇರಿಸುವ ನಿಟ್ಟಿನಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಈಗಾಗಲೇ ತಾಲೂಕಿನಲ್ಲಿ ವಿವಿಧ ಪಕ್ಷಗಳು ಸಂಘಟನೆಗಳು ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿವೆ. ತಾಲೂಕಿನ ಅರ್ಧಭಾಗ ಈ ವರದಿ ಜಾರಿಯಾದರೆ ನಿಸ್ತೇಜವಾಗುತ್ತದೆ ಜೊತೆಗೆ ಉಳಿದಿರುವ ಅರಣ್ಯವೂ ಕಳ್ಳ ಕಾಕರ ಪಾಲಾಗುವ ಸಂಶಯದಿಂದ ಸಾರ್ವಜನಿಕರು ನೂರಾರು ವರ್ಷಗಳಿಂದ ಉಳಿದು ಬೆಳೆಸಿದ ಕಾಡನ್ನು ನಾಡನ್ನು ರಕ್ಷಿಸುವ ಉದ್ದೇಶದಿಂದ ಈ ಪ್ರತಿಭಟನೆಯನ್ನು ನಡೆಸಲಾಯಿತು.

 

ಗ್ಯಾರೆಂಟಿ ಯೋಜನೆಯ ಅಧ್ಯಕ್ಷ ಮಂಗೇಶ್ ಕಾಮತ್ ಅವರ ನೇತೃತ್ವದಲ್ಲಿ ಪಕ್ಷಬೇಧ ಮರೆತು ಎಲ್ಲ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು. ಮಂಗೇಶ್ ಕಾಮತರ ನೇತೃತ್ವದಲ್ಲಿ ಕುಂಬಾರವಾಡದಿಂದ ಪಾದಯಾತ್ರೆಯ ಮೂಲಕ ಬಂದು ತಹಶೀಲ್ದಾರರಿಗೆ ಮನವಿ ನೀಡಲಾಯಿತು. ಸುಮಾರು 11 ಕಿಮೀ ಪಾದಯಾತ್ರೆ ಯಲ್ಲಿ ಆಗಮಿಸಿದ ಜನರು , ತಹಶೀಲ್ದಾರ್ ಕಚೇರಿ ಮುಂದೆ ಸಭೆ ನಡೆಸಿ ಮನವಿಪತ್ರವನ್ನು ರಾಜ್ಯ ಸರಕಾರಕ್ಕೆ ನೀಡಿದರು.

 

ಈ ಸಂದರ್ಭದಲ್ಲಿ ಪ್ರಮುಖ ರಾದ ಅರುಣ್ ದೇಸಾಯಿ, ಮಂಜುನಾಥ್ ಮೊಕಾಶಿ, ರಫೀಕ್ ಖಾಜಿ, ಉಳವಿಯ ಶಂಕರಯ್ಯ ಶಾಸ್ತ್ರೀ, ರವಿ ರೆಡ್ಕರ್, ಪ್ರೇಮಾನಂದ್ ವೇಳಿಫ್,ಸೇರಿದಂತೆ ಹಲವಾರು ಮುಖಂಡರು ಸಾರ್ವಜನಿಕರು, ಅದರಲ್ಲೂ ಮಹಿಳೆಯರು ಪಾಲ್ಗೊಂಡಿದ್ದರು, ಪಿಎಸ್ಐ ಮತ್ತು ಪೊಲೀಸ್ ಸಿಬ್ಬಂದಿ ಗಳು ಉಪಸ್ಥಿತರಿದ್ದರು, ಉಳವಿ ಟ್ರಸ್ಟ್ ನಿಂದ ಪಾದಯಾತ್ರೆಯ ಜನರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.