ಸುದ್ದಿ ಕನ್ನಡ ವಾರ್ತೆ
. ದುಬೈ:ಇಲ್ಲಿನ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಏಷ್ಯಾ ಕಪ್ ಟೂರ್ನಿಯ ಪೈನಲ್ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳೆಯರ ಕ್ರಿಕೆಟ್ ತಂಡವು ಶ್ರೀಲಂಕಾ ತಂಡವನ್ನು 72 ರನ್ಗಳಿಂದ ಸೋಲಿಸುವ ಮೂಲಕ ದಾಖಲೆಯ 8 ನೇ ಬಾರಿ ಮಹಿಳೆಯರ ಏಷ್ಯಾ ಕಪ್ ತನ್ನ ಮುಡಿಗೇರಿಸಿಕೊಂಡಿತು. ಟಾಸ್ ಗೆದ್ದ ಭಾರತ ಮಹಿಳಾ ಕ್ರಿಕೆಟ್ ತಂಡವು ಆರಂಭಿಕ ಆಟಗಾರರಾದ ಶಫಾಲಿ ವರ್ಮಾ ಹಾಗೂ ಸ್ಮ್ರತಿ ಮಂದಾನ ಜೋಡಿ ಮೊದಲ ವಿಕೆಟ್ ಜೊತೆಯಾಟದಲ್ಲಿ ದಾಖಲೆಯ 129 ರನ್ ಗಳಿಸಿದರು, ಇದರಿಂದಾಗಿ ತಂಡವು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಗಳಿಗೆ 183 ರನ್ ಗಳಿಸಿತು. ನಿಗದಿತ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ಮಹಿಳೆಯರ ಕ್ರಿಕೆಟ್ ತಂಡವು 20 ಓವರ್ ಗಳಲ್ಲಿ 111 ರನ್ ಗಳಿಸಿ ಅಲೌಟ್ ಆದ ಪರಿಣಾಮ ಸೋಲನ್ನು ಒಪ್ಪಿಕೊಂಡಿತು. ಭಾರತ ಮಹಿಳಾ ಕ್ರಿಕೆಟ್ ತಂಡವು ಪಾಕಿಸ್ತಾನ ಗೃಹ ಸಚಿವರು,ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ)ಮುಖ್ಯಸ್ಥ ಮೊಹ್ಸಿನ್ ನಕ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತು. ಕಳೆದ ವರ್ಷ ಸೂರ್ಯಕುಮಾರ ನೇತೃತ್ವದ ಭಾರತ ಪುರುಷರ ತಂಡವು ಏಷ್ಯಾ ಕಪ್ ಗೆದ್ದಾಗಲು ನಕ್ವಿ ಅವರಿಂದ ಟ್ರೋಫಿ ಸ್ವೀಕರಿಸಲಿಲ್ಲ. ಸಂಕ್ಷಿಪ್ತ ಸ್ಕೋರ್: ಭಾರತ: 20 ಓವರ್ಗಳಲ್ಲಿ 5ಕ್ಕೆ 183 (ಸ್ಮೃತಿ ಮಂದಾನ 59, ಶಫಾಲಿ ವರ್ಮಾ 68, ರಿಚಾ ಘೋಷ್ 17, ಜಿ. ಕಮಲಿನಿ ಔಟಾಗದೆ 15, ಮಿಥಾಲಿ ಅಯೋಧ್ಯಾ 33ಕ್ಕೆ 1, ಚಾಮರಿ ಅಟಪಟ್ಟು 34ಕ್ಕೆ 1, ಚಾಮುಡಿ ಪ್ರಬೋದಾ 40ಕ್ಕೆ 1). ಶ್ರೀಲಂಕಾ: 20 ಓವರ್ಗಳಲ್ಲಿ 111 (ಚಾಮರಿ ಅಟಪಟ್ಟು 36, ವಿಶ್ವ ಗುಣರತ್ನೆ 20, ನೀಲಾಕ್ಷಿಕಾ ಸಿಲ್ವ 22; ದೀಪ್ತಿ ಶರ್ಮಾ 19ಕ್ಕೆ 3, ಶ್ರೀಚರಣಿ 20ಕ್ಕೆ 4).
ಪಂದ್ಯದ ಆಟಗಾರ್ತಿ: ಶಫಾಲಿ ವರ್ಮಾ.
