ಸುದ್ದಿ ಕನ್ನಡ ವಾರ್ತೆ

ಶಿರಸಿ: ಉಜ್ಜಯಿನಿಯ ಮಹರ್ಷಿ ಸಾಂದೀಪನಿ ರಾಷ್ಟ್ರಿಯ ವೇದವಿದ್ಯಾ ಪ್ರತಿಷ್ಠಾನವು 40ನೇ ಸ್ಥಾಪನಾ ಮಹೋತ್ಸವದ ಅಂಗವಾಗಿ ಉಜ್ಜಯಿನಿಯಲ್ಲಿ ಆಯೋಜಿಸಿದ್ದ ರಾಷ್ಟ್ರಸ್ತರೀಯ ಸ್ಪರ್ಧೆಗಳಲ್ಲಿ ಸ್ವರ್ಣವಲ್ಲಿಯ
ಶ್ರೀ ರಾಜರಾಜೇಶ್ವರೀ ವೇದ ಗುರುಕುಲದ ವಿದ್ಯಾರ್ಥಿಗಳು ಬಹುಮಾನ ಪಡೆದು ಕೀರ್ತಿಭಾಜನರಾಗಿದ್ದಾರೆ.

ಸಾಮವೇದ ಅಂತ್ಯಾಕ್ಷರಿ ಸ್ಪರ್ಧೆಯಲ್ಲಿ ಹರ್ಷ ಮಿಶ್ರ ಪ್ರಥಮ ಮತ್ತು ಸುಲೇಖ ಲೇಖನ ಸ್ಪರ್ಧೆಯಲ್ಲಿ ದ್ವಿತೀಯ, ಋಗ್ವೇದ ಅಂತ್ಯಾಕ್ಷರಿ ಸ್ಪರ್ಧೆಯಲ್ಲಿ ಹರ್ಷ ವೈದ್ಯ ದ್ವಿತೀಯ ಹಾಗೂ ಕೆ ಸುಪ್ರೀತ್ ತೃತೀಯ, ಸಾಮವೇದ ಅಂತ್ಯಾಕ್ಷರಿ ಸ್ಪರ್ಧೆಯಲ್ಲಿ ಶಿವಂ ಪಾಠಕ್ ತೃತೀಯ, ಸಾಮವೇದ ಶಲಾಕಾ ಸ್ಪರ್ಧೆಯಲ್ಲಿ ಸಾಯಿಕೃಷ್ಣ ತೃತೀಯ ಹಾಗೂ ಋಗ್ವೇದ ಶಲಾಕಾ ಸ್ಪರ್ಧೆಯಲ್ಲಿ ಶ್ರೇಯಸ್ ಸಾಂತ್ವನ ಪುರಸ್ಕಾರವನ್ನು ಪಡೆದುಕೊಂಡಿದ್ದಾರೆ.

ಇವರ ಸಾಧನೆಯ ಕುರಿತು ಸ್ವರ್ಣವಲ್ಲಿಯ ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಹರ್ಷ ವ್ಯಕ್ತಪಡಿಸಿ ಆಶೀರ್ವದಿಸಿದ್ದಾರೆ. ಶ್ರೀ ರಾಜರಾಜೇಶ್ವರೀ ವಿದ್ಯಾಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಪ್ರಾಂಶುಪಾಲರು, ಅಧ್ಯಾಪಕರು ವಿದ್ಯಾರ್ಥಿಗಳು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.