Banner Ad

ಸುದ್ದಿ ಕನ್ನಡ ವಾರ್ತೆ

ಅನಂತ ಶ್ರೀ ವಿಭೂಷಿತ ಜಗದ್ದುರು ರಾಮಾನಂದಾಚಾರ್ಯ ಶ್ರೀಸ್ವಾಮಿ ನರೇಂದ್ರ ಚಾರ್ಯಜಿ ದಕ್ಷಿಣ ಪೀಠ ನಾಣಿ ಜಧಾಮ (ಮಹಾರಾಷ್ಟ್ರ)
ದೇಹದಾನ ಒಂದು ಪುಣ್ಯದ ಕೆಲಸ , ಮನುಷ್ಯ ಸತ್ತ ಮೇಲೆ ಈ ದೇಹದಾನ ಕಾರ್ಯವು ಕುಟುಂಬದವರ ಒಪ್ಪಿಗೆಯ ಮೇಲೆ ನಡೆಯುತ್ತದೆ. ಅದೇ ರೀತಿ ಜೊಯಿಡಾ ತಾಲೂಕಿನ ನಗರಿಯಲ್ಲಿ ಕೂಡ ಇತ್ತೀಚಿಗೆ ನಿಧನರಾದ ನಗರಿ ಗ್ರಾಮದ ಅನಂತ ಸೋಮ ಗಾವಡಾ(76) ಇವರ ನಿಧನದ ನಂತರ ಅವರ ದೇಹವನ್ನು ಕಾರವಾರದ ವೈದ್ಯಕೀಯ ಸಂಸ್ಥೆಗೆ ಗೆ ಹಸ್ತಾಂತರ ಮಾಡಲಾಗಿದೆ.

Banner Ad

ಶ್ರೀ ಜಗದ್ಗುರು ರಾಮಾನoದಾಚಾರ್ಯ ಶ್ರೀ ಸ್ವಾಮಿ ನರೇಂದ್ರಾಚಾರ್ಯಜಿ ನಾಣಿಜ ಮಹಾರಾಷ್ಟ್ರ ಇವರ ಪ್ರೇರಣೆಯಿಂದ ಜೊಯಿಡಾ ತಾಲೂಕಿನಲ್ಲಿ ವರ್ಷವಿಡೀ ಅನೇಕ ಸಾಮಾಜಿಕ ಕಾರ್ಯಕ್ರಮಗಳು ನಡೆಯುತ್ತಾ ಬಂದಿದೆ. ಅದರಂತೆ ಶ್ರೀ ಜಗದ್ಗುರುಗಳ ಭಕ್ತ ಕೈಲಾಸವಾಸಿ ಅನಂತ ಸೋಮ ಗಾವಡಾ (76) ಅವರ ದೇಹವನ್ನು ಕಾರವಾರದ ವೈದ್ಯಾಧಿಕಾರಿ ಗಳಿಗೆ ಹಸ್ತಾತರಿಸಲಾಗಿದೆ. ಅವರ ಮಕ್ಕಳಾದ ಕಮಲಾಕರ ಗಾವಡಾ ರಾಮದಾಸ ಗಾವಡಾ ಮತ್ತು ಕುಟುಂಬಸ್ಥರು ಈ ಉತ್ತಮ ನಿರ್ಣಯ ವನ್ನು ಮಾಡಿದ್ದಾರೆ. ತಮ್ಮ ಹಿರಿಯರ ದೇಹವು ಸಮಾಜ ಕಾರ್ಯಕ್ಕೆ ಉಪಯೋಗ ವಾಗಲೆಂದು ಸ್ವ ಇಚ್ಛೆಯಿಂದ ನಿರ್ಣಯಿಸಿ ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದೇಹದಾನವನ್ನು ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ಮಾಡಿರುತ್ತಾರೆ. ಇದು ಶ್ರೀ ಜಗದ್ಗುರು ರಾಮಾನಂದ ಚಾರ್ಯ ಸಂಸ್ಥೆ ವತಿಯಿಂದ 238 ನೆ ದೇಹಧಾನಆಗಿದೆ ಇದರಲ್ಲಿ ಜೋಯಿಡಾದಿಂದ 2 ದೆಹದಾನ ಮತ್ತು 1 ನೇತ್ರಧಾನ ಸ್ವಾಮಿಜಿಯವರ ಪ್ರೇರಣೆಯಿಂದ ನೀಡಲಾಗಿದೆ ಎಂದು ತಿಳಿದು ಬಂದಿದೆ. ಉತ್ತರ ಕನ್ನಡ ಪೂರ್ವ ಜಿಲ್ಲೆಯ ತಾಲೂಕಾ ಸಮಿತಿ , ಸೇವಾ ಕೇಂದ್ರ ಸಮಿತಿ ಮತ್ತು ನಗರಿ. ಗ್ರಾಮದ ಬಂದುಗಳು, ಕಾರವಾರದ ಬಂದುಗಳು ವಜ್ರಕಾಂತ ದಾಸ ಮಹಾರಾಜ ,
ಪ್ರಕಾಶ್ ವೆಳೀಪ ರೂಪೇಶ ನಾಯ್ಕ , ಪ್ರವೀಣ ದೇಸಾಯಿ, ಪೂಜಾ ಗಾವಡಾ ಪ್ರವೀಣ ನಾಯ್ಕ ತಾಲೂಕಾ ಅಧ್ಯಕ್ಷ , ಸುರೇಂದ್ರ ಮಿರಾಶಿ , ಜ್ಞಾನೇಶ್ವರ ನಾಯ್ಕ ಲಕ್ಷಣ ನಾಯ್ಕ, ಮಾಜಿ ಅಧ್ಯಕ್ಷ ಸಂದೀಪ ಗಾವಡಾ ಇತರ ಅನೇಕ ನಾಣಿಜ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತ ರಿದ್ದರು. ಕಾರವಾರದ ವೈದ್ಯಕೀಯವಿಜ್ಞಾನ ಸಂಸ್ಥೆ ಯವರು ವಾರಸು ದಾರರಿಗೆ ದೇಹವನ್ನು ಪಡೆದ ಬಗ್ಗೆ ಪ್ರಮಾಣ ಪತ್ರವನ್ನು ನೀಡಿರುತ್ತಾರೆ.ಇದು ಜೋಯಿಡಾ ದ ನಗರಿಯ ಜನತೆಯ ಮಾದರಿ ಕಾರ್ಯ ವಾಗಿದೆ.

Banner Ad