Banner Ad

ಸುದ್ದಿ ಕನ್ನಡ ವಾರ್ತೆ

ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಆರು ರಾಜ್ಯಗಳ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ “ಪರಿಸರ ಸೂಕ್ಷ್ಮ ಪ್ರದೇಶ” ಎಂದು ಘೋಷಣೆ ಮಾಡಲು ಕರಡು ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ೬೦ ದಿನಗಳ ಕಾಲಾವಕಾಶ ನೀಡಿದೆ. ಅದೇ ರೀತಿ ಈ ಹಿಂದೆ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಹೊರವಲಯದಲ್ಲಿ “ಪರಿಸರ ಸೂಕ್ಷ್ಮ ವಲಯ” ಎಂದು ಘೋಷಣೆ ಮಾಡಲು ಕರಡು ಅಧಿಸೂಚನೆ ಹೊರಡಿಸಿದೆ.

Banner Ad

 

ಈ ಎರಡೂ ವಿಷಯಗಳ ಅಂತಿಮ ಅಧಿಸೂಚನೆ ಜಾರಿಯಾದರೆ ಜೋಯಡಾ ತಾಲ್ಲೂಕಿನ ಬಹುತೇಕ ಗ್ರಾಮಗಳು ಸಂಕಷ್ಟ ಕ್ಕೆ ಸಿಲುಕಲಿವೆ. ಅದ್ದರಿಂದ ಈ ಎರಡೂ ವಿಷಯಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಮುಂದಿನ ಹೆಜ್ಜೆ ಇಡಲು ಸಾರ್ವಜನಿಕ ಸಭೆಯನ್ನು ಕರೆಯಲಾಗಿದೆ.

ಈ ವಿಶೇಷ ಸಭೆಯಲ್ಲಿ ESZ/ESA ಜಾರಿಯಾದರೆ ಅದ್ದರಿಂದ ತಾಲ್ಲೂಕಿನ ಜನರಿಗೆ ಆಗುವಂತಹ ಅನಾಹುತಗಳ ಬಗ್ಗೆ ಸವಿಸ್ತಾರವಾಗಿ ಚರ್ಚೆ ನಡೆಸಲಾಗುವದು. ಅದೇ ರೀತಿ ಆಕ್ಷೇಪಣೆ ಸಲ್ಲಿಸುವುದು ಮತ್ತು ಬಹಿರಂಗ ಹೋರಾಟ ಮಾಡುವುದರ ಬಗ್ಗೆ ಚರ್ಚೆ ಮಾಡಲಾಗುವದು. ಈ ಸಭೆಯ ನೇತೃತ್ವ ಕಾಲಿಕಾ ಮಠದ ಪೂಜ್ಯ ಸ್ವಾಮೀಜಿ ಶ್ರೀ ಶ್ರೀ ರಘು ವೀರ ಸ್ವಾಮೀಜಿಗಳು ವಹಿಸಲಿದ್ದು ತಾಲ್ಲೂಕಿನ ಎಲ್ಲಾ ಸಂಘ ಸಂಸ್ಥೆಗಳು, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ರೈತರು, ಕೂಲಿ ಕಾರ್ಮಿಕರು, ಯುವಕ ಸಂಘಗಳು, ಸ್ವ ಸಹಾಯ ಸಂಘಗಳು ಮತ್ತು ಸಾರ್ವಜನಿಕರು ಬರುವ ದಿನಾಂಕ 19 ರಂದು ಕುಣುಬಿ ಭವನದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಬೇಕೆಂದು ಶ್ರೀ ಶ್ರೀ ರಘುವೀರ ಸ್ವಾಮಿಜಿಗಳು ಕರೆ ನೀಡಿದ್ದಾರೆ.

Banner Ad