Banner Ad

ಸುದ್ದಿ ಕನ್ನಡ ವಾರ್ತೆ

ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ಹಳಿಯಾಳ ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉತ್ತರ ಕನ್ನಡ, ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ (DMF) ಉತ್ತರ ಕನ್ನಡ, ಇವರ ಸಹಯೋಗದಲ್ಲಿ 30 ದಿನಗಳ ಕೌಶಲ್ಯ ಅಭಿವೃದ್ಧಿ  ಮಹಿಳೆಯರಿಗಾಗಿ ಟೇಲರಿಂಗ್  ತರಬೇತಿ ಯನ್ನು ತಿನ್ನಯಘಾಟ್ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.

Banner Ad

ನಿಕಟಪೂರ್ವ ಜಿಲ್ಲಾ ಪಂಚಾಯತಿ ಸದಸ್ಯಸಂಜಯ ಹಣಬರ್ ಕಾರ್ಯಕ್ರಮ ಉದ್ಘಾಟಿಸಿದರು ಅತಿಥಿಗಳಾದ ತಾಲೂಕು ಪಂಚಾಯತ್ ವ್ಯವಸ್ಥಾಪಕ ಮಂಜುನಾಥ್ ಇವರು ತರಬೇತಿಯನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ಸ್ವಂತ ಉದ್ಯೋಗ ಮಾಡಿಕೊಳ್ಳಿ ಎಂದು ಶಿಬಿರಾರ್ಥಿ ಗಳಿಗೆ ಶುಭ ಹಾರೈಸಿದರು ವಿನಾಯಕ್ ಚೌಹಾನ್ ಯೋಜನಾ ಸಂಯೋಜಕರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ಇವರು ಮಾತನಾಡಿ ಇದು 30 ದಿನಗಳ ಉಚಿತ ತರಬೇತಿ ಯಾಗಿದ್ದು ಎಲ್ಲರೂ ತಪ್ಪದೇ ತರಬೇತಿಯಲ್ಲಿ ಭಾಗವಹಿಸಿ ತರಬೇತಿಯ ಕೌಶಲ್ಯದ ಮಾಹಿತಿಯನ್ನು ಪಡೆದುಕೊಳ್ಳಿ ಮತ್ತು ಹೊಸತನಗಳ ಕಲಿಕೆಯನ್ನು ಹೊಲಿಗೆಯಲ್ಲಿ ಕಲಿತುಕೊಳ್ಳಿ ಎಂದು ಹೇಳಿದರು ಕಾರ್ಯಕ್ರಮದ ಅಧ್ಯಕ್ಷರಾದ ಕಿರಣ್ ಕುಮಾರ್ ಬಗಾಡೆ ನಿರ್ದೇಶಕರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ಇವರು ಶಿಬಿರಾರ್ಥಿಗಳಿಗೆ ನಮ್ಮ ಸಂಸ್ಥೆಯಲ್ಲಿ ನಡೆಯುವ ತರಬೇತಿಗಳ ಕುರಿತು ಮಾಹಿತಿ ನೀಡಿದರು.

ಮುಂದೆ ಸಾವಲಂಬಿಗಳಾಗಿ ಬದುಕಿ ಎಂದು ಹಿತ ನುಡಿದರು ಸಂಸ್ಥೆಯ ಅಶೋಕ್ ಸೂರ್ಯವಂಶಿ ಯೋಜನಾಧಿಕಾರಿಗಳು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಜೋಯಿಡಾಇವರು ಸ್ವಾಗತಿಸಿದರು ಮನೋಹರ್ ಚವರಿಯವರ್ ಕ್ಷೇತ್ರ ಮೇಲ್ವಿಚಾರಕರು ಕಾರ್ಯಕ್ರಮವನ್ನು ಆಯೋಜಿಸಿ ವಂದಿಸಿದರು.

Banner Ad