Banner Ad

ಸುದ್ದಿ ಕನ್ನಡ ವಾರ್ತೆ

ಜೊಯಿಡಾ ತಾಲೂಕಿನ ಪೊಟೋಲಿ ಗುಂದ ಉಳವಿ ರಸ್ತೆಯಲ್ಲಿ ಗುರುವಾರ ರಾತ್ರಿ ಶಿರಸಿ ಉಳವಿ ಬಸ್ ಗೆ ಕೆಲವು ಕುಡುಕರು ತೊಂದರೆ ನೀಡಿ ಮುಕ್ಕಾಲು ತಾಸು ಬಸ್ ಅನ್ನು ತಡೆದು ನಿಲ್ಲಿಸಿದ್ದರು. ಈ ಬಗ್ಗೆ ಗಮನಿಸಿದ ಜೊಯಿಡಾ ಪಿಎಸ್ಐ ಜಗದೀಶ್ ನಾಯ್ಕ್ ಅವರು ಸುದ್ದಿ ತಿಳಿದ ತಕ್ಷಣ ಗುಂದಕ್ಕೆ ಬಂದು ಈ ಕುರಿತು ಸ್ಪಂದಿಸಿದ್ದಕ್ಕಾಗಿ ಗ್ರಾಮಸ್ಥರು ಅವರನ್ನು ಅಭಿನಂದಿಸಿದ್ದಾರೆ.

Banner Ad

ಗುರುವಾರ ಸಂಜೆಯ ವೇಳೆ ಉಳವಿಗೆ ಹೋಗಬೇಕಾಗಿದ್ದ ಶಿರಸಿ ಉಳವಿ ಬಸ್ ಅನ್ನು ಕೈಟಾ ನಾಲ ಸೇತುವೆ ಮೇಲೆ ಕೆಲವು ಕುಡುಕರು ತಡೆದು ನಿಲ್ಲಿಸಿದರು. ಅಪರಿಚಿತರು ಬಸ್ ಅನ್ನು ತಡೆದುದ್ದಕ್ಕಾಗಿ ಬಸ್ ನಲ್ಲಿದ್ದ ಪ್ರಯಾಣಿಕರು ಹೆದರಿದ್ದರು. ಬಸ್ ನ ಗ್ಲಾಸ್ ಬಾಗಿಲು ಗಳನ್ನು ಮುಚ್ಚಿಕೊಂಡರೂ ಈ ಕುಡುಕರು ಬಸ್ಸನ್ನು ತಡೆದು ಧಭ ಧಬ ಬಡಿದು ಜನರನ್ನು ಹೆದರಿಸಿದರು.ಚಾಲಕನು ದೂರವಾಣಿ ಮಾಡಲು ಅಲ್ಲಿ ನೆಟ್ವರ್ಕ್ ಕೂಡ ಇರಲಿಲ್ಲ.
ಶುಕ್ರವಾರ ಈ ವಿಷಯ ತಿಳಿದ ಜೊಯಿಡಾ ಪಿಎಸ್ಐ ಮತ್ತವರ ತಂಡ ಗುಂದ ಕ್ಕೆ ಬಂದು ಮಾಹಿತಿ ಪಡೆದಿದ್ದಾರೆ.

ಅವರ ಈ ತ್ವರಿತ ಕಾಳಜಿಗೆ ಗ್ರಾಮಸ್ಥರು ಪೊಲೀಸ್ ಇಲಾಖೆಗೆ ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ವೇಧಮೂರ್ತಿ ಪ್ರಸನ್ನ ಭಟ್ಟ , ಶ್ರೀ ಸೋಮೇಶ್ವರ ದೇವಸ್ಥಾನದ ಅಧ್ಯಕ್ಷ ಮಂಜುನಾಥ್ ಭಾಗ್ವತ್, ಬಸ್ ನಲ್ಲಿದ್ದ ಬಾಲಚಂದ್ರ ಭಟ್ಟ, ಪತ್ರಕರ್ತ ಸಂಘದ ಅಧ್ಯಕ್ಷ ಸಂದೇಶ ದೇಸಾಯಿ ಪತ್ರಕರ್ತ ಹರೀಶ ಭಟ್ ಇತರರು ಪಿಎಸ್ಐ ಜಗದೀಶ ನಾಯ್ಕ ಅವರೊಂದಿಗೆ ಚರ್ಚಿಸಿ, ರಸ್ತೆ ಯಲ್ಲಿ ಮೋಜು ಮಸ್ತಿ ಮಾಡುವುದು ಪ್ರಯಾಣಿಕರಿಗೆ ತೊಂದರೆ ಕೊಡುವುದು ಸರಿ ಅಲ್ಲ ಈ ಬಗ್ಗೆ ಅರಣ್ಯ ಇಲಾಖೆ ಗೆ ಮಾಹಿತಿ ನೀಡಿ ಸ್ಥಳೀಯರಿಗೆ ಓಡಾಡಲು ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದರು ಈ ಸಂದರ್ಭದಲ್ಲಿ ಪಿಎಸ್ಐ ಜಗದೀಶ್ ಅವರು ಮಾತನಾಡಿ ಅರಣ್ಯ ಇಲಾಖೆಯೊಂದಿಗೆ ಮಾತನಾಡುತ್ತೇನೆ ಗಸ್ತು ಹಾಕುವ ವ್ಯವಸ್ಥೆಮಾಡುತ್ತೇನೆ.ಪಾಟೋಲಿ ಮತ್ತು ಉಳವಿ ಗೇಟ್ ಗಳಲ್ಲಿ ಹೊರ ಜಿಲ್ಲೆಯಿಂದ ಬರುವ ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಹೇಳುತ್ತೇನೆ ಎಂಬ ಭರವಸೆ ನೀಡಿದ್ದಾರೆ. ಇದು ಸಾರ್ವಜನಿಕರಿಗೆ ಸಂತಸ ತಂದಿದೆ.

Banner Ad