ಸುದ್ದಿ ಕನ್ನಡ ವಾರ್ತೆ
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಚಿವ ಲಕ್ಷ್ಮಣ ಸವದಿ ನೇಮಕ ಗೊಂಡಿದ್ದಾರೆ. ಇದರಿಂದ ಹಿಂದೆ ಉಸ್ತುವಾರಿ ಸಚಿವರಾಗಿದ್ದ ಸಚಿವ ಯು ಟಿ ಖಾದರ ಅವರ ಅವಧಿ ಮುಗಿದಂತಾಗಿದೆ. ಕಡಿಮೆ ಅವಧಿ ಯಲ್ಲೂ ಸಚಿವ ಯು ಟಿ ಖಾದರ ಅವರು ಜಿಲ್ಲೆಗೆ ಎರಡು ಬಾರಿ ಬಂದು ಜಿಲ್ಲೆಯ ಸಮಸ್ಯೆ ಆಲಿಸಿದ್ದರು. ಈಗ ಉಸ್ತುವಾರಿ ಸಚಿವ ರಾಗಿರುವ ಲಕ್ಷ್ಮಣ ಸವದಿ ಅವರು ಬೆಳಗಾವಿ ಜಿಲ್ಲೆಯವರಾಗಿದ್ದಾರೆ ಇದರಿಂದ ಉಸ್ತುವಾರಿ ಸಚಿವರಿಗೆ ಉತ್ತರ ಕನ್ನಡ ಜಿಲ್ಲೆ ಹತ್ತಿರವೇ ಇದೆ.
ಉಳಿದ ಎರಡು ವರ್ಷ ದಲ್ಲಿ ಲಕ್ಷ್ಮಣ ಸವದಿ ಅವರೇ ಉಸ್ತುವಾರಿ ಯಾಗಿರುತ್ತಾರೆಯೋ, ಅಥವಾ, ಬೇರೆಯವರಿಗೆ ಕೊಡುತ್ತಾರೆಯೋ ಎನ್ನುವುದು ಸರಕಾರಕ್ಕೆ ಬಿಟ್ಟ ವಿಷಯ ವಾದರೂ, ಉಳಿದಿರುವ ಒಂದು ಮಂತ್ರಿ ಸ್ಥಾನ ವನ್ನು ಜಿಲ್ಲೆಗೆ ಕೊಟ್ಟಲ್ಲಿ ಅವರಿಗೆ ಉಸ್ತುವಾರಿಯ ಭಾಗ್ಯ ಸಿಗುವ ಅವಕಾಶ ವಿದೆ.
ಲಕ್ಷ್ಮಣ ಸವದಿ ಯವರು ಉಸ್ತುವಾರಿ ಸಚಿವರಾದರೂ ಅವರಿಗೆ ಜಿಲ್ಲೆಯ ಸಮಸ್ಯೆ ಗಳು ಸ್ಥಳೀಯ ಶಾಸಕರಿಗೆ ತಿಳಿದಂತೆ ತಿಳಿದಿರುವುದಿಲ್ಲ, ಇದರಿಂದ ಸರಕಾರ ನಡೆಸಲು ಕಷ್ಟ ವಾಗುತ್ತದೆ, ಹಾಗಾಗಿ ಅವರು ಜಿಲ್ಲೆಯ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಾಗುತ್ತದೆ, ಆದರೆ ತಮ್ಮನ್ನು ಧಿಕ್ಕರಿಸಿ ಬೇರೆ ಜಿಲ್ಲೆಯವರಿಗೆ, ಅಧಿಕಾರ ನೀಡಿರುವ ಬೇಸರ ಸಹಜವಾಗಿ ಜಿಲ್ಲೆಯ ಶಾಸಕರಿಗೆ ಇರುತ್ತದೆ ಇದರಿಂದ ಮುಂದೇನಾಗುತ್ತದೆ ಎಂದು ಜಿಲ್ಲೆಯ ಜನರು ಕಾದು ನೋಡಬೇಕಾಗಿದೆ.
