ಸುದ್ದಿ ಕನ್ನಡ ವಾರ್ತೆ
ಜೊಯಿಡಾ ತಾಲೂಕಿನಲ್ಲಿ ಕರ್ನಾಟಕದ ಕಾಂಗ್ರೆಸ್ ಪಕ್ಷದ ಸಂಘಟನ್ ಸೃಜನ್ ಅಭಿಯಾನ ಸಮಾರಂಭ ಅದ್ದೂರಿಯಾಗಿ ನಡೆಯಿತು.

ತಾಲೂಕಾ ಕಾಂಗ್ರೆಸ್ ಅಧ್ಯಕ್ಷ ಮಾರುತಿ ಗಾವಡಾ ಮತ್ತು ಕೆಪಿಸಿಸಿ ಸದಸ್ಯ ಸದಾನಂದ ದಬಗಾರ ಇವರುಗಳು ಶಾಸಕ ಆರ್.ವಿ. ದೇಶಪಾಂಡೆ ಅವರ ಸೂಚನೆಯಂತೆ ಸಂಘಟನಾ ಸೃಜನ್ ಅಭಿಯಾನ ಕಾರ್ಯಕ್ರಮ ಸಂಘಟಿಸಿದ್ದರು.
ಈ ಸಭೆಗೆ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷೆ ಮಾಜಿ ಶಾಸಕಿ ರೋಸಲೀನ ಟರ್ಕೆ ಜಿಲ್ಲಾ ಅಧ್ಯಕ್ಷ ಸಾಯಿ ಗಾಂವಕರ , ಎ. ಐ. ಸಿ.ಸಿ ಮತ್ತು ಕೆಪಿಸಿಸಿ ಸದಸ್ಯರು ಗಳು ಪ್ರಮುಖರು ಉಪಸ್ಥಿತರಿದ್ದು ಪಕ್ಷದ ಸಂಘಟನೆ ಮತ್ತು ಮುಂಬರುವ ಜಿಲ್ಲಾ ಅಧ್ಯಕ್ಷರ ಚುನಾವಣೆಗೆ ಸಂಬಂಧ ಪಟ್ಟಂತೆ ಸಾಕಷ್ಟು ಚರ್ಚೆ ನಡೆಸಿದರು.
ಕೆಪಿಸಿಸಿ ಸದಸ್ಯ ಸದಾನಂದ ದಬಗಾರ, ತಾಲೂಕಾ ಅಧ್ಯಕ್ಷ ಮಾರುತಿ ಪಾಟೀಲ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಕನ್ಯಾ ದೇಸಾಯಿ ಪಕ್ಷದ ಪ್ರಮುಖರಾದ ಶ್ರೀಧರ ದಬಗಾರ ಕಾರ್ಯಕ್ರಮ ಉತ್ತಮವಾಗಿ ನಡೆಯುವಂತೆ ನೋಡಿಕೊಂಡರು. ತಾಲೂಕಿನ ಕಾಂಗ್ರೆಸ್ ಪಕ್ಷದ ಎಲ್ಲ ಪ್ರಮುಖರು ಉಪಸ್ಥಿತರಿದ್ದರು, ಎಂದು ತಿಳಿದು ಬಂದಿದೆ.
