ಸುದ್ದಿ ಕನ್ನಡ ವಾರ್ತೆ
ಕುಮಟಾ: ಭಟ್ಕಳ ತಾಲೂಕಿನ ಮುರುಡೇಶ್ವರದ ಬೀನಾ ವೈದ್ಯ ಕಾಲೇಜಿನಲ್ಲಿ ನಡೆದ ಜಿಲ್ಲಾಮಟ್ಟದ ಟೇಬಲ್ ಟೆನಿಸ್ ಕ್ರೀಡಾಕೂಟದಲ್ಲಿ ಸಿ.ವಿ.ಎಸ್.ಕೆ. ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

​ತನ್ವಿ ಹೆಗಡೆ, ಸಾನ್ವಿ ಹೆಗಡೆ, ಸಾನ್ವಿಕ ಶೇಟ್, ರಕ್ಷಾ ನಾಯ್ಕ ಹಾಗೂ ಧರಣಿ ಗಟ್ಟಿಮನಿ ಅವರನ್ನು ಒಳಗೊಂಡ ನಮ್ಮ ಪ್ರೌಢಶಾಲೆಯ ಬಾಲಕಿಯರ ತಂಡವು ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿದೆ.
​ಇದೇ ಸಂದರ್ಭದಲ್ಲಿ ಶಾಲೆಯ ಬಾಲಕರ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿದೆ. ತಂಡದ ಅನ್ಮೋಲ್ ನಾಯ್ಕ ಹಾಗೂ ಪ್ರೇಮ್ ಶೇಟ್ ಅವರು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

​ರಾಜ್ಯಮಟ್ಟದ ಟೇಬಲ್ ಟೆನಿಸ್ ಕ್ರೀಡಾಕೂಟವು ಅ. 1ರಿಂದ 4ರ ವರೆಗೆ ಬೆಂಗಳೂರು ಉತ್ತರದಲ್ಲಿ ನಡೆಯಲಿದೆ.