ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಪ್ರವಾಸಿ ತಾಣವಾದ ಜೋಯಿಡಾದ ಅರಣ್ಯ ಇಲಾಖೆಯ ಚಿಟ್ಟೆ ಪಾರ್ಕ್ ಆವರಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ “ಪತ್ರಿಕಾ ದಿನಾಚರಣೆ” ಕಾರ್ಯಕ್ರಮ ನಡೆಯಿತು ಈ ದಿನವನ್ನು ಗಣ್ಯರು ಗಿಡ ನೆಡುವ ಮೂಲಕ ಪರಿಸರಸ್ನೇಹಿಯಾಗಿ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಕೆಪಿಸಿಸಿ (KPCC) ಸದಸ್ಯರಾದ ಸದಾನಂದ ದಬ್ಗಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ದಬಗಾರ ಅವರು “ಪತ್ರಕರ್ತರು ಸಮಾಜದ ಅತ್ಯಂತ ಪ್ರಮುಖ ಹಾಗೂ ಜವಾಬ್ದಾರಿಯುತ ಅಂಗವಾಗಿದ್ದಾರೆ. ಸಮಾಜದ ತಪ್ಪು-ಒಪ್ಪುಗಳನ್ನು ತಿದ್ದಿ, ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ವಾಗಿ ದೇಶದ ಪ್ರಗತಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ” ತಾಲೂಕಿನಲ್ಲಿ ಕಾರ್ಯನಿರತ ಪತ್ರ ಸಂಘದವರು ಜನರ ದ್ವನಿಯಗಿದ್ದಾರೆ ಎಂದು ಶ್ಲಾಘಿಸಿದರು.
ಗ್ರಾಮೀಣ ಮತ್ತು ಕಾನನ ದಂತಹ ದುರ್ಗಮ ಪ್ರದೇಶಗಳಲ್ಲಿಯೂ ಜೀವದ ಹಂಗು ತೊರೆದು, ಜನಸಾಮಾನ್ಯರ ಮತ್ತು ಅಭಿವೃದ್ಧಿ ಪರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಇಲ್ಲಿನ ಪತ್ರಕರ್ತರ ಶ್ರಮ ಅಪಾರವಾದುದು ಎಂದು ಸದಾನಂದ ದಬ್ಗಾರ ಅವರುಪತ್ರ ಕರ್ತರ ಗುಣಗಾನ ಮಾಡಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜೋಯಿಡಾ ಪೊಲೀಸ್ ಉಪನಿರೀಕ್ಷಕರಾದ (PSI) ಜಗದೀಶ್ ನಾಯ್ಕ್ ಅವರು, ಪತ್ರಕರ್ತರ ನಡೆ ಮತ್ತು ಸಮಾಜದ ಕಡೆಗಿನ ಅವರ ಕರ್ತವ್ಯಗಳ ಕುರಿತು, ದೈನಂದಿನ ಪತ್ರಿಕೆ ಬಗ್ಗೆ ಮಾತನಾಡಿ, “ಪತ್ರಕರ್ತರು, ಸಮಾಜದ ಅಂಕು ಡೊಂಕು ತೋರಿಸುವುದರ ಜೊತೆಗೆ ಸಾರ್ವಜನಿಕವಾಗಿ ನಡೆ ಮತ್ತುನುಡಿ ವರದಿಗಾರಿಕೆ ಸದಾ ಸಮಾಜದ ಹಿತವನ್ನು ಕಾಯುವಂತಿರಬೇಕು. ಪೊಲೀಸ್ ಇಲಾಖೆ ಮತ್ತು ಪತ್ರಿಕೋದ್ಯಮ ಎರಡೂ ಸಮಾಜದಲ್ಲಿ ಕಾನೂನು, ಸುವ್ಯವಸ್ಥೆ ಮತ್ತು ನ್ಯಾಯವನ್ನು ಎತ್ತಿಹಿಡಿಯುವಲ್ಲಿ ಪರಸ್ಪರ ಪೂರಕವಾಗಿ ಕೆಲಸ ಮಾಡುತ್ತವೆ” ಎಂದು ಪಿಎಸ್ಐ ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಜೋಯಿಡಾ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಮಾರುತಿ ಗಾವಡೆ, ಜೋಯಿಡಾ ಅರಣ್ಯ ಇಲಾಕೆಯ ರಾಜೇಶ್, ಸುರೇಶ ಪಿ, ಜೋಯಿಡಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ದೇಸಾಯಿ, ಜಿಲ್ಲಾ ಕಾರ್ಯದರ್ಶಿ ಅನಂತ ದೇಸಾಯಿ ಜಿಲ್ಲಾ ಸದಸ್ಯ ಸದಸ್ಯ ಹರೀಶ್ ಭಟ್ಟ, ಸದಸ್ಯ ಸುಭಾಷ್ ಗಾವಡಾ, ಟಿ ಕೆ ದೇಸಾಯಿ, ಜ್ಞಾನೇಶ್ವರ ದೇಸಾಯಿ ಸುನಿಲ ಸೇಟ್ಕರ್ ಇತರ ಅರಣ್ಯ ಇಲಾಕೆ ಸಿಬ್ಬಂದಿಗಳು ಇದ್ದರು.