ಸುದ್ದಿ ಕನ್ನಡ ವಾರ್ತೆ

ಶಿರಸಿ:ಅರಣ್ಯ ಅತಿಕ್ರಮಣ ದಾರರ ಮನೆಗಳಿಂದ ತೆರಿಗೆ ಸಂಗ್ರಹ ಮಾಡದಂತೆ ಸರ್ಕಾರ ಪಂಚಾಯತ್ ಗಳಿಗೆ ಆದೇಶ ನೀಡಿದೆ. ರೈತರು ಈಗಾಗಲೇ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದೊಂದು ರೈತವಿರೋಧಿ ಸರ್ಕಾರವಾಗಿದೆ ಎಂದು ಬಿಜೆಪಿಯ ಪ್ರಮುಖ ಆರ್ ಡಿ ಹೆಗಡೆ ಹೇಳಿದರು.

ತಾಲೂಕಿನ ವಾನಳ್ಳಿ ಪಂಚಾಯತ್ ಎದುರು ನಮ್ಮ ಮನೆ ನಮ್ಮ ಹಕ್ಕು ಜನಾಗ್ರಹ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಹೊರಡಿಸಿರುವ ರೈತವಿರೋಧಿ ನೀತಿಯನ್ನು ಕೈಬಿಡಬೇಕು. ಜನರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಆದೇಶ ಹಿಂಪಡೆಯುವ ವರೇಗೂ ನಾವು ಹೋರಾಟ ಮಾಡುತ್ತಲೇ ಇರುತ್ತೇವೆ. ಸರ್ಕಾರ ರಾಜ್ಯದ ೧೫೦ ತಾಲೂಕುಗಳನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿದೆ.ಆದರೆ ನಮ್ಮ ಜಿಲ್ಲೆಯ ಅಡಿಕೆ ಬೆಳೆಗಾರರ ಮೇಲೆ ಸ್ವಲ್ಪವೂ ಕನಿಕರ ಸರ್ಕಾರಕ್ಕಿಲ್ಲ. ಧ್ವನಿ ಎತ್ತಬೇಕಾದ ಸ್ಥಳೀಯ ಶಾಸಕರು ಎನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಆದೇಶವನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕು. ಆದೇಶ ಹಿಂಪಡೆಯುವ ದಿದ್ದರೆ ರಾಜೀನಾಮೆ ಕೋಡುತ್ತೆನೆ ಎಂದು ಹೇಳುವ ಸಾಮರ್ಥ್ಯ ಇಲ್ಲ. ಎಚ್ ಕೆ ಪಾಟೀಲ್ ಅವರಿಗೆ ಇರುವ ಜನಪರ ಚಿಂತನೆಗಳು ಜಿಲ್ಲೆಯ ಕಾಂಗ್ರೆಸ್ ಶಾಸಕರಿಗಿಲ್ಲ. ಕಾಂಗ್ರೆಸ್ ಸರ್ಕಾರ ಕುರುಡು ಹಾಗೂ ಕಿವುಡು ಸರ್ಕಾರ. ಜನಪರವಾದ ಯಾವುದೇ ಮಾತುಗಳನ್ನು ಕಾಂಗ್ರೆಸ್ ಸರ್ಕಾರ ಆಡುತ್ತಿಲ್ಲ ಎಂದರು.

ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಒಂದು ವರ್ಷ ದಿಂದ ಸಿದ್ದತೆ ಮಾಡಿಕೊಂಡು ಆದೇಶ ಹೊರಡಿಸಿದೆ. ರೈತರನ್ನು ಬೀದಿಗೆ ತಳ್ಳುವ ಕೆಲಸ ಮಾಡುತ್ತಿದೆ. ಬ್ರೀಟಿಷರು ಸಹ ಇಷ್ಟೊಂದು ಕ್ರೂರಿಗಳಾಗಿರಲಿಲ್ಲ ಆದರೆ ಕಾಂಗ್ರೆಸ್ ಸರ್ಕಾರ ಅವರಿಗಿಂತಲೂ ಕ್ರೂರಿಗಳಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಇರಬೇಕಿತ್ತು ಆದರೆ ಬಿಸಿಲು ಅಬ್ಬರಿಸುತ್ತಿದೆ. ಶಿರಸಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ ಬೇಕಿತ್ತು.ಆದರೆ ಮಾಡಿಲ್ಲ. ಅರಣ್ಯ ಅತಿಕ್ರಮಣ ದಾರರಿಗೆ ಪಟ್ಟ ಕೊಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇಂದು ಭೂಮಿಯನ್ನು ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ನಮ್ಮ ರೈತರಿಗೆ ಅನ್ಯಾಯವಾದರೆ, ತೊಂದರೆ ಯಾದರೆ ರಾಜೀನಾಮೆ ಕೊಡುತ್ತೇನೆ ಎಂದು ಸ್ಥಳೀಯ ಶಾಸಕರಿಗೆ ತಾಕತ್ ಇದ್ದರೆ ಹೇಳಲಿ ಎಂದು ಸವಾಲೆಸೆದರು. ಶಿರಸಿ ಯಲ್ಲಿ ಮಾತನಾಡುವುದು.ಬೆಂಗಳೂರಿನಲ್ಲಿ ಮೌನ ತಾಳುವುದು. ಇಂತಹ ದ್ವಂದ್ವ ನೀತಿ ಜನರಿಗೆ ಅರ್ಥವಾಗುತ್ತಿದೆ. ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ನರಸಿಂಹ ಹೆಗಡೆ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಜಯರಾಮ ಹೆಗಡೆ, ಪ್ರವೀಣ ಹೆಗಡೆ, ರಾಘವ ಹೆಗಡೆ, ಅನುಸೂಯ ಹೆಗಡೆ, ಕೃಷ್ಣ ಸಿದ್ದಿ , ನಾಗರಾಜ ಶೆಟ್ಟಿ, ದತ್ತಾತ್ರೇಯ ವೈದ್ಯ
ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳು ಸೇರಿದಂತೆ ಹಲವರು ಇದ್ದರು. ಶೇಖರ್ ಹೆಗಡೆ ಸ್ವಾಗತಿಸಿದರು. ಕವಿತಾ ಭಟ್ ವಂದಿಸಿದರು.