Banner Ad

ಸುದ್ದಿ ಕನ್ನಡ ವಾರ್ತೆ

ಸಿದ್ದಾಪುರದಲ್ಲಿ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ

Banner Ad

ಸಿದ್ದಾಪುರ ತಾಲೂಕಿನ ಕಾನಸೂರಿನ ಕಲಕಟ್ಟೆಯ ಬಿಕಾಂ ವಿದ್ಯಾರ್ಥಿ ಅಭಿರಾಮ್ ವೆಂಕಟ್ರಮಣ ಹೆಗಡೆ (21) ಆತ್ಮಹತ್ಯೆಗೆ ಶರಣಾದವನಾಗಿದ್ದಾನೆ . ಈತ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನೋಟ್‌ಬುಕ್‌ನಲ್ಲಿ ಸೂಸೈಡ್ ನೋಟ್ ಬರೆದಿಟ್ಟು ನನ್ನ ಆತ್ಮಹತ್ಯೆಗೆ ನಾನೇ ಕಾರಣ ಎಂದು ಬರೆದಿಟ್ಟಿದ್ದಾನೆ.ಈ ಬಾರಿ ನಡೆದ ಪರೀಕ್ಷೆಯಲ್ಲಿ ನಾನು ಮೂರು ವಿಷಯದಲ್ಲಿ ಫೇಲ್ ಆಗುವ ಸಾಧ್ಯತೆ ಇದ್ದು, ಇದರಿಂದ ಮನಸ್ಸಿಗೆ ಬೇಸರವಾಗಿದೆ. ಇದರಿಂದ ನೊಂದಿದ್ದೇನೆ ನನ್ನ ಭವಿಷ್ಯ ಮುಗಿದು ಹೋಗಿದೆ. ಇನ್ನು ನಾನು ಇದ್ದು ಏನು ಪ್ರಯೋಜನ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾನೆ.

ಉಡುಪಿಯ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಈತ , ಕಳೆದ ಕೆಲ ದಿನಗಳ ಹಿಂದೆ ತಂದೆಯ ಜೊತೆಗೆಉಡುಪಿಗೆಹೋಗಿ ಅಡ್ಮಿಷನ್ ಮಾಡಿ ಬಂದಿದ್ದ. ಪರೀಕ್ಷೆಯಲ್ಲಿ ಫೇಲಾಗುವ ಸಾಧ್ಯತೆ ಇದೆ ಎಂಬ ಬಲವಾದ ನಂಬಿಕೆಯಿಂದ ಇತ ಮನೆಯ ಕೋಣೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸಪೆಕ್ಟರ್ ಜೆ.ಬಿ. ಸೀತಾರಾಮ ಹಾಗೂ ಪಿಎಸ್‌ಐ ಶಾಂತಿನಾಥ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Banner Ad