Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಪ್ರಮುಖ ಸಂಪರ್ಕ ಕೊಂಡಿಯಾದ ಸದಾಶಿವಗಡ- ಔರಾದ ರಾಜ್ಯ ಹೆದ್ದಾರಿಯ ನುಜ್ಜಿ- ಅಣಶಿ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಪೂರ್ಣ ಕಾಮಗಾರಿಯಿಂದಾಗಿ ಸಣ್ಣ ಮಳೆ ಬಂದರು ಮಳೆನೀರು ರಸ್ತೆಯಲ್ಲೇ ನಿಂತು ರಸ್ತೆಯೋ ಅಥವಾ ಕೆರೆಯೋ ಎಂಬಂತೆ ಕಾಣುತ್ತಿದ್ದು, ಸರಿಪಡಿಸಬೇಕಾದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸುಮ್ಮನೆ ಕುಳಿತಿರುವುದು ವಾಹನ ಸವಾರರಿಗೆ ಸಂಚಾರಕ್ಕೆ ಸಂಕಟ ವಾಗಿ ಪರಿಣಮಿಸಿದೆ.

Banner Ad

​ಕುಂಬಾರವಾಡಾದಿಂದ ಪ್ರಾರಂಭವಾಗಿ ಅಣಶಿ ಬಳಿ ರಸ್ತೆ ಎರಡು ಭಾಗದಲ್ಲಿ ಗಟಾರು ತೆಗೆಯಲಾಗಿದ್ದು, ಗಟಾರು ಮಣ್ಣು ರಸ್ತೆಯಲ್ಲಿ ಹಾಕಲಾಗಿದೆ. ಇದರಿಂದಾಗಿ ರಸ್ತೆಯಲ್ಲಿಯೇ ನೀರು ನಿಲ್ಲುವಂತಾಗಿದ್ದು, ರಸ್ತೆಯಲ್ಲಿ ಎಷ್ಟು ನೀರು ತುಂಬಿಕೊಂಡಿದೆ ಎಂದು ತಿಳಿಯದೆ ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ.
​ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನಹರಿಸಿ ಜನರಿಗೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕಿದೆ.

Banner Ad